News

ಅಕ್ರಮ ಸಂಬಂಧಕ್ಕೆ ಮಗಳ ಹತ್ಯೆ: ತಾಯಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

Share It

ಅಕ್ರಮ ಸಂಬಂಧದ ಕಾರಣಕ್ಕೆ ಸ್ವಂತ ಮಗಳನ್ನೇ ಹತ್ಯೆ ಮಾಡಿ, ನಂತರ ಆಕೆಯ ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸಲು ಮುಂದಾಗಿದ್ದ ಆರೋಪಿ ತಾಯಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.

ಓರ್ವ ತಾಯಿ ತನ್ನ ಹೆತ್ತ ಮಗಳನ್ನೇ ಹತ್ಯೆ ಮಾಡುವುದು ಮಾನವೀಯತೆಗೆ ಅಪಮಾನ ಮಾಡಿದಂತೆ. ಅಷ್ಟೇ ಅಲ್ಲ ಇಂತಹ ಕೃತ್ಯ ಅತ್ಯಂತ ಕ್ರೂರ ಮತ್ತು ಗಂಭೀರ ವಿಚಾರ ಎಂದು ಉತ್ತರಾಖಂಡ ರಾಜ್ಯದ ಬಿಜನೂರ್ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

 ಇದೇ ವೇಳೆ ಅಪರಾಧಿ ಮಹಿಳೆಯ ಪ್ರಿಯಕರನ ವಿರುದ್ಧ ಸಾಕಷ್ಟು ಸಾಕ್ಷ್ಯಗಳು ಲಭವಿಲ್ಲದ ಕಾರಣ ಆತನನ್ನು ಖುಲಾಸೆಗೊಳಿಸಿ ಕೋರ್ಟ್ ಆದೇಶಿಸಿದೆ. ರಾಣಿ ವರ್ಮಾ (34) ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಹಿಳೆ.

ಈಕೆ ತನ್ನ ಪತಿಯೊಂದಿಗೆ ಜಗಳ ಮಾಡಿಕೊಂಡು ತನ್ನಿಬ್ಬರು ಮಕ್ಕಳೊಂದಿಗೆ ಪ್ರತ್ಯೇಕ ವಾಸಿಸುತ್ತಿದ್ದಳು. 2023ರ ಡಿಸೆಂಬರ್ 21 ರಂದು ಮಕ್ಕಳು ಮನೆಯಲ್ಲಿಲ್ಲದ ವೇಳೆ ಪ್ರಿಯಕರ ಅನಿಲ್ ಕುಮಾರ್ ಈಕೆಯ ಮನೆಗೆ ಬಂದಿದ್ದ. ಇಬ್ಬರೂ ಹಾಸಿಗೆಯಲ್ಲಿ ಒಟ್ಟಿಗೆ ಇದ್ದಾಗ 14 ವರ್ಷದ ಪುತ್ರಿ ಖುಷ್ಬೂ ಒಳಬಂದು ನೋಡಿದ್ದಳು.

ಈ ಹಿನ್ನೆಲೆಯಲ್ಲಿ ತನ್ನ ಅಕ್ರಮ ಸಂಬಂಧ ಜನರಿಗೆ ತಿಳಿಯುತ್ತದೆ ಎಂದು ಮಗಳನ್ನು ಕುತ್ತಿಗೆ ಹಿಸುಕಿ, ಉಸಿರುಗಟ್ಟಿಸಿ ಕೊಲ್ಲಲಾಗಿತ್ತು. ನಂತರ ಮಗಳು ಆತ್ಮಹತ್ಯೆ ಎಂದು ಬಿಂಬಿಸಲು ಮುಂದಾಗಿದ್ದಳು. ಪತಿ ನೀಡಿದ ಪೊಲೀಸರ ತನಿಖೆ ವೇಳೆ ಕೊಲೆ ಬಯಲಾಗಿತ್ತು. ಹಾಗೆಯೇ ವೈದ್ಯರ ವರದಿ ಉಸಿರುಗಟ್ಟಿಸಿ ಕೊಂದಿರುವುದನ್ನು ಸ್ಪಷ್ಟಪಡಿಸಿತ್ತು. ಸಾಕ್ಷ್ಯ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ತಾಯಿಗೆ ಜೀವಾವಧಿ ಜೈಲು ಶಿಕ್ಷ ವಿಧಿಸಲಾಗಿದೆ.


Share It

You cannot copy content of this page