News

ಜ್ಯೋತಿರ್ಲಿಂಗ, ಏಕತಾ ಪ್ರತಿಮೆ ಪ್ರವಾಸಕ್ಕಾಗಿ ಭಾರತ್ ಗೌರವ್ ಯಾತ್ರಾ ರೈಲು ಪ್ರಾರಂಭ

Share It

ನವದೆಹಲಿ: ಆಧ್ಯಾತ್ಮಿಕ ಹಾಗೂ ಐತಿಹಾಸಿಕ ಪ್ರವಾಸಕ್ಕಾಗಿ, ಭಾರತೀಯ ರೈಲ್ವೆ ವಿಶೇಷ ಭಾರತ್ ಗೌರವ್ ಯಾತ್ರಾ ರೈಲುವನ್ನು ಪ್ರಾರಂಭಿಸಲಿದೆ. ಈ ರೈಲಿನಲ್ಲಿ ನಾಲ್ಕು ಜ್ಯೋತಿರ್ಲಿಂಗ ಹಾಗೂ ಏಕತಾ ಪ್ರತಿಮೆಯನ್ನು ಒಳಗೊಂಡ ಒಂಬತ್ತು ದಿನಗಳ ಪ್ರವಾಸ ಮಾಡಬುದಾಗಿದೆ.

ಈ ರೈಲು ಯಾತ್ರೆಯಲ್ಲಿ ದೇಶದ ಅತ್ಯಂತ ಪವಿತ್ರ ದೇವಾಲಯಗಳು ಮತ್ತು ದೇಶದ ಅತಿ ಎತ್ತರದ ಆಧುನಿಕ ಸ್ಮಾರಕಗಳನ್ನು ನೋಡುವ ಅವಕಾಶ ದೊರೆಯಲ್ಲಿದ್ದು, ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಈ ಪ್ರವಾಸದ ನಿರ್ವಹಣೆಯನ್ನು ವಹಿಸಿಕೊಂಡಿದೆ. ಈ ಯಾತ್ರೆಯು ಅಕ್ಟೋಬರ್ 25ರಂದು ಅಮೃತಸರದಿಂದ ಪ್ರಾರಂಭವಾಗಲಿದೆ.

ಪ್ರಯಾಣಿಕರು ಜಲಂಧರ್, ಲುಧಿಯಾನ, ಚಂಡೀಗಢ, ಅಂಬಾಲ, ಕುರುಕ್ಷೇತ್ರ, ಪಾಣಿಪತ್, ಸೋನಿಪತ್, ದೆಹಲಿ ಕ್ಯಾಂಟ್ ಮತ್ತು ರೇವಾರಿ ನಿಲ್ದಾಣಗಳಲ್ಲಿ ರೈಲು ಹತ್ತಬಹುದಾಗಿದೆ. ಈ ಪ್ರವಾಸದಲ್ಲಿ ಮಹಾಕಾಳೇಶ್ವರ ಮತ್ತು ಓಂಕಾರೇಶ್ವರ (ಉಜ್ಜಯಿನಿ), ನಾಗೇಶ್ವರ (ದ್ವಾರಕಾ ಸಮೀಪ), ಮತ್ತು ಸೋಮನಾಥ್ (ವೇರಾವಲ್) ಜ್ಯೋತಿರ್ಲಿಂಗ ದೇವಾಲಯಗಳು, ದ್ವಾರಕಾಧೀಶ ದೇವಾಲಯ ಮತ್ತು ಕೆವಾಡಿಯಾದಲ್ಲಿರುವ ಏಕತಾ ಪ್ರತಿಮೆಯನ್ನು ಸಂದರ್ಶಿಸಬಹುದಾಗಿದೆ.

ಈ ವಿಶೇಷ ರೈಲಿನಲ್ಲಿ 762 ಪ್ರಯಾಣಿಕರು ಪ್ರಯಾಣಿಸಬಹುದಾಗಿದ್ದು, ಎಕಾನಮಿ, ಸ್ಟ್ಯಾಂಡರ್ಡ್ ಮತ್ತು ಕಂಫರ್ಟ್ ಎಂಬ ಮೂರು ವಿಭಾಗಗಳಲ್ಲಿ ಟಿಕೆಟ್‌ಗಳು ಲಭ್ಯವಿದೆ. ಪ್ರತಿ ವ್ಯಕ್ತಿಗೆ 19,555 ರೂ. ರಿಂದ 39,410 ರೂ ವರೆಗೆ ದರ ನಿಗದಿಪಡಿಸಲಾಗಿದೆ. ಈ ದರದಲ್ಲಿ ರೈಲಿನಲ್ಲಿ ಸಸ್ಯಾಹಾರಿ ಊಟ, ವಸತಿ, ಸ್ಥಳೀಯ ಪ್ರಯಾಣ, ವೀಕ್ಷಣೆ, ಪ್ರಯಾಣ ವಿಮೆ ಮತ್ತು ಭದ್ರತೆಗಳು ಸೇರಿವೆ. ಎಕಾನಮಿ ದರ್ಜೆಯ ಪ್ರಯಾಣಿಕರಿಗೆ ಎಸಿ ರಹಿತ ಹೋಟೆಲ್‌ಗಳಲ್ಲಿ ವಸತಿ ಒದಗಿಸಲಾಗಲಿದೆ. ದೇವಾಲಯಗಳಿಗೆ ತೆರಳಲು ಆಟೋ-ರಿಕ್ಷಾ, ಸ್ಮಾರಕಗಳ ಪ್ರವೇಶ ಶುಲ್ಕ, ವೈಯಕ್ತಿಕ ಖರ್ಚುಗಳು ಮತ್ತು ಟಿಪ್ಸ್‌ಗಳನ್ನು ಪ್ರಯಾಣಿಕರೇ ಭರಿಸಬೇಕಿದೆ.


Share It

You cannot copy content of this page