Education News

ಪಿಜಿಸಿಇಟಿ ಆಪ್ಷನ್ ಎಂಟ್ರಿ ಆರಂಭ

Share It

ಬೆಂಗಳೂರು: ಪಿಜಿಸಿಇಟಿ ಎಂಬಿಎ, ಎಂಸಿಎ, ಎಂಟೆಕ್, ಎಂಇ, ಎಂ.ಆರ್ಕ್ ಕೋರ್ಸ್ ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಬುಧವಾರದಿಂದ ಆರಂಭವಾಗಿದ್ದು ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಸೆ.28ರವರೆಗೆ ಅವಕಾಶ ನೀಡಲಾಗಿದೆ.

ಸೆ.29ರಂದು ಅಣಕು ಫಲಿತಾಂಶ ಪ್ರಕಟಿಸಲಾಗುತ್ತಿದ್ದು, ಇಚ್ಛೆ/ಆಯ್ಕೆಗಳನ್ನು ಮರುಕ್ರಮಗೊಳಿಸಲು ಅ.3ರವರೆಗೆ ಅವಕಾಶ ಇರಲಿದೆ. ಅ.3ರಂದು ಸಂಜೆ 5 ಗಂಟೆಗೆ ತಾತ್ಕಾಲಿಕ ಫಲಿತಾಂಶ ಪ್ರಕಟವಾಗಲಿದೆ. ಅ.4ರಂದು ಅಂತಿಮ ಫಲಿತಾಂಶ ಹೊರಬೀಳಲಿದೆ.

ಸೀಟು ಹಂಚಿಕೆಯಾದವರು ಪೋಷಕರ ಜತೆ ಚರ್ಚಿಸಿ, ಛಾಯ್ಸ್ ದಾಖಲಿಸಲು ಅ.7ರವರೆಗೆ ಅವಕಾಶ ಇರಲಿದೆ. ಛಾಯ್ಸ್-1, ಛಾಯ್ಸ್-2 ದಾಖಲಿಸಿದವರು ಶುಲ್ಕ ಕಟ್ಟಬೇಕಿದೆ. ಛಾಯ್ಸ್-1 ದಾಖಲಿಸಿದವರು ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಿಕೊಂಡು, ಅ.9ರೊಳಗೆ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕಿದೆ.


Share It

You cannot copy content of this page