Education News

ಯುಜಿನೀಟ್ 2ನೇ ಸುತ್ತಿನ ಫಲಿತಾಂಶ ಪ್ರಕಟ

Share It

ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ ಪದವಿ ಕೋರ್ಸ್ ಗಳ ಎರಡನೇ ಹಾಗೂ ಆಯುಷ್ ಕೋರ್ಸ್ ಗಳ ಮೂರನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಪ್ರಕಟಗೊಂಡಿದ್ದು, ಈ ಕೋರ್ಸ್ ಗಳಿಗೆ ಇದುವರೆಗೂ ಒಟ್ಟು 18,867 ಸೀಟು ಹಂಚಿಕೆ ಮಾಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಮಾಹಿತಿ ನೀಡಿದ್ದಾರೆ.

ಎರಡೂ ಸುತ್ತುಗಳಿಂದ ವೈದ್ಯಕೀಯ ಕೋರ್ಸ್ ಗೆ 9,958, ದಂತ ವೈದ್ಯಕೀಯ ಕೋರ್ಸ್ ಗೆ 2,658 ಮತ್ತು ಆಯುಷ್ ಕೋರ್ಸ್ ಗಳಿಗೆ 6,257 ಸೀಟು ಹಂಚಿಕೆ ಮಾಡಲಾಗಿದೆ. ಇದುವರೆಗಿನ ಸೀಟು ಹಂಚಿಕೆಯ ನಂತರ ವೈದ್ಯಕೀಯ ಕೋರ್ಸ್ ನಲ್ಲಿ 158, ದಂತ ವೈದ್ಯಕೀಯದಲ್ಲಿ 50 ಹಾಗೂ ಆಯುಷ್ ಕೋರ್ಸ್ ಗಳಲ್ಲಿ 6,251 ಸೀಟುಗಳು ಉಳಿದಿವೆ ಎಂದು ವಿವರಿಸಿದ್ದಾರೆ.

ಇವಲ್ಲದೆ, ಎರಡನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟುಗಳಿಗೆ ಪ್ರವೇಶ ಪಡೆಯದೇ ಉಳಿಯುವ ಸೀಟುಗಳನ್ನು ಮಾಪ್ ಅಪ್ ಸುತ್ತಿನ ಸೀಟು ಹಂಚಿಕೆಗೆ ಪರಿಗಣಿಸಲಾಗುವುದು. ಈ ಸುತ್ತಿನಲ್ಲಿ ಸೀಟು ಹಂಚಿಕೆಯಾದವರಿಗೆ ಶುಲ್ಕ ಪಾವತಿಸಲು ಸೆ.26ರವರೆಗೆ ಹಾಗೂ ಕಾಲೇಜಿಗೆ ವರದಿ ಮಾಡಿಕೊಳ್ಳಲು ಸೆ.28ರವರೆಗೆ ಅವಕಾಶ ನೀಡಲಾಗಿದೆ ಎಂದು ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಿದ್ದಾರೆ.


Share It

You cannot copy content of this page