ಶ್ಯೂರಿಟಿಯಾಗಿ ನೀಡುವ ಚೆಕ್ ಗಳನ್ನ ಡಿಪಾಸಿಟ್ ಮಾಡುವಂತಿಲ್ಲ. ಅವುಗಳ ಉದ್ದೇಶ ರಕ್ಷಣೆಯಷ್ಟೇ ಆ ಚೆಕ್ ಗಳು ಯಾವುದೇ ಸಾಲವನ್ನ ವಾಪಸ್ಸು ಪಡೆಯಲು ಡಿಪಾಸಿಟ್ ಮಾಡುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ದೆಹಲಿ ಹೈಕೋರ್ಟ್ ನ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಈ ಮಹತ್ವದ ಅದೇಶ ನೀಡಿದ್ದು ಶ್ಯೂರಿಟಿ ಚೆಕ್ ಗಳನ್ನ ನಿರ್ದಿಷ್ಟ ಉದ್ದೇಶಕ್ಕೆ ನೀಡಲಾಗಿರುತ್ತೆ. ಅದನ್ನ ಹೊರತುಪಡಿಸಿ ಯಾವುದೇ ಸಾಲವನ್ನ ಹಿಂಪಡೆಯಲು ಅವುಗಳನ್ನ ಡಿಪಾಸಿಟ್ ಮಾಡುವಂತಿಲ್ಲ ಎಂದು ಅವರು ಅದೇಶ ನೀಡಿದ್ದಾರೆ.
ಸಾಮಾನ್ಯವಾಗಿ ಯಾರಿಂದಾದರೂ ಸಾಲವನ್ನ ಪಡೆಯುವಾಗ ಶ್ಯೂರಿಟಿಯಾಗಿ ಚೆಕ್ ಗಳನ್ನ ನೀಡಲಾಗಿರುತ್ತೆ. ಆದರೆ ಸಾಲ ವಾಪಸ್ಸು ನೀಡದೇ ಇದ್ದಾಗ ಅದೇ ಚೆಕ್ ಗಳನ್ನ ಡಿಪಾಸಿಟ್ ಮಾಡಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸುವ ಹಲವು ಪ್ರಕರಣಗಳನ್ನ ನಾವು ಈಗಾಗಲೇ ನೋಡಿದ್ದೇವೆ ಈ ಹಿನ್ನಲೆಯಲ್ಲಿ ಈ ತೀರ್ಪು ತುಂಬಾ ಮಹತ್ವವನ್ನ ಪಡೆದುಕೊಂಡಿದೆ.
ಶ್ರೀ ಸಾಯಿ ಸಪ್ತಗಿರಿ ಎನ್ನುವ ಕಂಪನಿ, ಮ್ಯಗ್ನಿಫಿಷಿಯೋ ಮಿನರಲ್ಸ್ ಎನ್ನುವ ಕಂಪನಿಗೆ 1.91 ಕೋಟಿಗೆ ಸಂಬಂಧಿಸಿದಂತೆ ಶ್ಯೂರಿಟಿಯಾಗಿ ಐದು ಚೆಕ್ ಗಳನ್ನ ನೀಡಿತ್ತು. ಆದರೆ ಹಣ ವಾಪಸ್ಸು ಬರದೇ ಇದ್ದಾಗ ಮ್ಯಗ್ನಿಫಿಷಿಯೋ ಮಿನರಲ್ಸ್ ಕಂಪನಿ ಐದು ಚೆಕ್ ಗಳನ್ನ ಡಿಪಾಸಿಟ್ ಮಾಡಿತ್ತು. ನಂತರ ಈ ಐದು ಚೆಕ್ ಗಳು ಬೌನ್ಸ ಆಗಿದ್ದವು. ಈ ಹಿನ್ನಲೆಯಲ್ಲಿ ನಾವು ಚೆಕ್ ಗಳನ್ನ ನೀಡಿದ ಉದ್ದೇಶ ಶ್ಯೂರಿಟಿ ಕಾರಣ ಮಾತ್ರಕ್ಕೆ ಆದರೆ ಮ್ಯಗ್ನಿಫಿಷಿಯೋ ಮಿನರಲ್ಸ್ ಕಂಪನಿ ಇದನ್ನ ಡಿಪಾಸಿಟ್ ಮಾಡಿಕೊಳ್ಳುವ ಮೂಲಕ ದುರ್ಬಳಕೆ ಮಾಡಿಕೊಂಡಿದೆ. ಎಂದು ವಾದಿಸಿತ್ತು. ಈ ಪ್ರಕರಣದ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್ ಈ ಅದೇಶವನ್ನ ನೀಡಿದೆ
ಶ್ಯೂರಿಟಿ ಚೆಕ್ ಗಳನ್ನ ಡಿಪಾಸಿಟ್ ಮಾಡುವಂತಿಲ್ಲ-ದೆಹಲಿ ಹೈಕೋರ್ಟ್

