News

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ 973 ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ

Share It

ಬೆಂಗಳೂರು: ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದ ವಿವಿಧ ಇಲಾಖೆ/ನಿಗಮಗಳಲ್ಲಿನ 973 ಖಾಲಿ ಹುದ್ದೆಗಳ ನೇಮಕಾತಿಯ ಸಂಬಂಧ ಲಿಖಿತ ಪರೀಕ್ಷೆಗಳನ್ನು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಹೈದರಾಬಾದ್ ಕರ್ನಾಟಕ (ಹೆಚ್ ಕೆ) ಕೋಟಾ ಕ್ಲೇಮ್ ಮಾಡಿರುವ ಅಭ್ಯರ್ಥಿಗಳಿಗೆ ಡಿ.20, 21, ಜನವರಿ 24 ಮತ್ತು ಫೆಬ್ರುವರಿ 22ರಂದು ಪರೀಕ್ಷೆಗಳು ಇವೆ. ಇದರಲ್ಲಿ 391 ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಯಲಿದೆ. ಹೈದರಾಬಾದ್ ಕರ್ನಾಟಕ ಕೋಟಾ ಕ್ಲೇಮ್ ಮಾಡದವರಿಗೆ (ನಾನ್ ಹೆಚ್ ಕೆ) ಜನವರಿ 10, 11, 12 ಮತ್ತು 25ರಂದು ವಿವಿಧ ಪರೀಕ್ಷೆಗಳು ನಡೆಯಲಿವೆ. ಇದರಲ್ಲಿ 582 ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ.

ಹೆಚ್ ಕೆ ಹಾಗೂ ನಾನ್- ಹೆಚ್ ಕೆ – ಎರಡೂ ಪರೀಕ್ಷೆಗಳಲ್ಲಿ ಋಣಾತ್ಮಕ ಮೌಲ್ಯಮಾಪನವಿದ್ದು, ಪ್ರತಿ ತಪ್ಪು ಉತ್ತರಕ್ಕೆ 1/4 ಅಂಕ ಕಡಿತ ಮಾಡಲಾಗುತ್ತದೆ. ತಾಂತ್ರಿಕ ಶಿಕ್ಷಣ, ಕೃಷಿ ಮಾರಾಟ‌, ಬಿಡಿಎ, ಬೆಂಗಳೂರು ಜಲಮಂಡಳಿ, ಕೆಎಸ್ ಡಿ ಎಲ್, ಕೆಕೆಆರ್ ಟಿಸಿ, ಆರ್ ಜಿಯುಎಚ್ಎಸ್, ಕೆಎಸ್ಎಸ್ಐಡಿಸಿ, ಶಾಲಾ ಶಿಕ್ಷಣ ಇತ್ಯಾದಿ ಇಲಾಖೆ/ನಿಗಮ- ಮಂಡಳಿಗಳ ವಿವಿಧ ದರ್ಜೆಯ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗುತ್ತದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ವಿವರಿಸಿದ್ದಾರೆ.


Share It

You cannot copy content of this page