News

ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಕಾರ್ಯನಿವಹಸಲಿದೆ ಅತ್ಯಾಧುನಿಕ ಕ್ಷಯ ರೋಗ ಪರೀಕ್ಷಾ ಯಂತ್ರ

Share It

ಬೆಂಗಳೂರು: ನಗರದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಕ್ಷಯ ರೋಗ ಪರೀಕ್ಷಾ ಯಂತ್ರ ಸಿಬಿಎನ್‌ಎಎಟಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.

ಸಿಂಜೆಂಟಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಿಎಸ್‌ಆರ್‌ಹಣದಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಸುಮಾರು 1.5 ಕೋಟಿ ಮೊತ್ತದ 7 ಯಂತ್ರಗಳನ್ನು ನೀಡಿದೆ. ಈ ಪೈಕಿ ತಲಾ 3 ಯಂತ್ರಗಳನ್ನು ವಿಜಯನಗರ ಮತ್ತು ಕೋಲಾರ ಜಿಲ್ಲೆಗೆ ನೀಡಲಾಗಿದ್ದು, ಒಂದನ್ನು ಕೆ.ಸಿ. ಜನರಲ್ ಆಸ್ಪತ್ರೆಗೆ ನೀಡಲಾಗಿದೆ. ಅತ್ಯಂತ ನಿಖರ ಫಲಿತಾಂಶ ನೀಡುವ ಈ ಯಂತ್ರಗಳಿಂದ ಕ್ಷಯ ರೋಗವನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಲು ಸಾಧ್ಯವಾಗಲಿದೆ. ಮೈಕ್ರೋಸ್ಕೋಪಿಕ್ ಪರೀಕ್ಷೆಯಲ್ಲಿ ಕೆಲವೊಮ್ಮೆ ಆರಂಭಿಕ ಹಂತದಲ್ಲಿ ರೊಗ ಪತ್ತೆ ಸಾಧ್ಯವಾಗಲಿದೆ.

ರೋಗಿಗೆ ಸಮಸ್ಯೆ ಆಗುತ್ತಿತ್ತು ಮತ್ತು ಈ ವಿಧಾ ನದಲ್ಲಿ 10,000 ಎಂಎಲ್ ಬೆಸಿಲಿಯನ್ ಇದ್ದರೆ ಮಾತ್ರ ರೋಗವನ್ನು ಗುರುತಿಸಬಹುದಾಗಿದ್ದು, ಅದಕ್ಕೂ ಕಡಿಮೆ ಇದ್ದಾಗ ಗುರುತಿಸುವುದು ಕಷ್ಟ ಆಗುತ್ತಿತ್ತು. ಸಿಬಿಎನ್‌ಎಎಟಿ ಯಂತ್ರದಲ್ಲಿ 137 ಎಂಎಲ್ ಬೆಸಲಿಯನ್ ಇದ್ದಾಗಲೂ ಪತ್ತೆಹಚ್ಚಬಹುದಾಗಿದೆ. ಕೇವಲ 90 ನಿಮಿಷದಲ್ಲಿ ಕ್ಷಯ ರೋಗಾಣು ಪತ್ತೆ ಹಚ್ಚಬಹುದಾಗಿದೆ. ಇನ್ನು ಇಂದು ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿಗಳು, ವೈದ್ಯರುಗಳು, ಸಿಂಜೆಂಟಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಪ್ರತಿನಿಧಿಗಳು ಉಪಸ್ಥಿತರಿದ್ದರು.


Share It

You cannot copy content of this page