News

ಶಾಲಾ-ಕಾಲೇಜು, ಕಚೇರಿ, ಸಂಸ್ಥೆಗಳಿಂದ ಬೀದಿ ನಾಯಿಗಳ ಮಾಹಿತಿ ಪಡೆಯಿರಿ: ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್

Share It

ಬೆಂಗಳೂರು: ಶಾಲಾ-ಕಾಲೇಜು ಹಾಗೂ ವಿವಿಧ ಕಚೇರಿ, ಸಂಸ್ಥೆೆಗಳಿಂದ ಬೀದಿ ನಾಯಿಗಳ ಮಾಹಿತಿ ಪಡೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಸೂಚನೆ ನೀಡಿದರು.

ನಗರದ ಎಂ.ಜಿ. ರಸ್ತೆೆಯ ಪಿ.ಯು.ಬಿ. ಕಟ್ಟಡದ ಸಭಾಂಗಣದಲ್ಲಿ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ವೋಚ್ಛ ನ್ಯಾಾಯಾಲಯದ ಸುಮೊಟೋ ರಿಟ್ ಅರ್ಜಿ (ಸಿವಿಲ್) ನಂ.5/2025 ಆದೇಶದ ಮಾರ್ಗಸೂಚಿಯಂತೆ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಗಳ ನಿರ್ದೇಶನದಂತೆ ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಾಪ್ತಿಿಗೆ ಒಳಪಡುವ ಶಾಲಾ ಕಾಲೇಜು, ಸರಕಾರಿ ಇಲಾಖೆಗಳು, ಅರೆ ಸರಕಾರಿ ನಿಗಮ/ಮಂಡಳಿ/ಸಂಸ್ಥೆೆಗಳು, ಸರಕಾರಿ ಹಾಗೂ ಖಾಸಗಿ ಆಸ್ಪತ್ರೆೆಗಳು, ರೈಲ್ವೆೆ ನಿಲ್ದಾಣ, ಬಸ್ ನಿಲ್ದಾಾಣ, ಬಸ್ ಡಿಪೋಗಳು, ಹಾಗೂ ಆಟದ ಮೈದಾನಗಳು, ಪಾರ್ಕ್ ಗಳ ಆವರಣಗಳಲ್ಲಿನ ಬೀದಿ ನಾಯಿಗಳ ಮಾಹಿತಿ ಸಂಗ್ರಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿ ಸಂಸ್ಥೆೆಗಳಲ್ಲಿ ನೋಡಲ್ ಅಧಿಕಾರಿಗಳ ನೇಮಿಸುವುದು:

ಪ್ರತಿ ಶಾಲೆ ಕಾಲೇಜು/ಆಸ್ಪತ್ರೆೆಗಳು, ಸರಕಾರಿ, ಅರೆ ಸರಕಾರಿ ಇಲಾಖೆ/ಸಂಸ್ಥೆೆ/ನಿಗಮ ಮಂಡಳಿಗಳಲ್ಲಿನ ಬೀದಿ ನಾಯಿಗಳ ಮಾಹಿತಿ ಸಂಗ್ರಹಣೆಗಾಗಿ ಆಯಾಯ ಸಂಸ್ಥೆೆ ವತಿಯಿಂದ ಒಬ್ಬರು ನೋಡಲ್ ಅಧಿಕಾರಿಗಳನ್ನು ನೇಮಿಸಲು ಪತ್ರ ಬರೆಯುವಂತೆ ಹಾಗೂ ನಗರ ಪಾಲಿಕೆಯ ಅಧಿಕಾರಿಗಳು ಅವರೊಂದಿಗೆ ಸಂವಹನ ಸಾಧಿಸಿ ತುರ್ತಾಗಿ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದರು.

ವಿಧಾನಸಭಾ ಕ್ಷೇತ್ರವಾರು ಉಸ್ತುವಾರಿಗಳ ನೇಮಕ:

ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಆಯಾ ವಿಭಾಗದ ಕಾರ್ಯಪಾಲಕ ಅಭಿಯಂತರರನ್ನು ನೋಡಲ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದ ಆಯುಕ್ತರು ಆಯಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಮೂಲಕ ಶಾಲಾ ಕಾಲೇಜು, ಸರಕಾರಿ ಇಲಾಖೆಗಳು, ಅರೆ ಸರಕಾರಿ ನಿಗಮ/ಮಂಡಳಿ/ಸಂಸ್ಥೆೆಗಳು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆೆಗಳು, ರೈಲ್ವೆ ನಿಲ್ದಾಾಣ, ಬಸ್ ನಿಲ್ದಾಾಣ, ಬಸ್ ಡಿಪೋಗಳ ಮುಖ್ಯಸ್ಥರಿಗೆ ನೋಟಿಸ್ ನೀಡಲು ಹಾಗೂ ಸದರಿ ಸಂಸ್ಥೆೆಗಳಿಂದ ತುರ್ತಾಗಿ ಬೀದಿ ನಾಯಿಗಳ ಮಾಹಿತಿ ಪಡೆಯಲು ಉಸ್ತುವಾರಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಬೇಕು ಹಾಗೂ ಎರಡೂ ವಲಯಗಳ ಜಂಟಿ ಆಯುಕ್ತರು, ಹಾಗೂ ಮುಖ್ಯ ಅಭಿಯಂತರರು ಈ ನಿಟ್ಟಿನಲ್ಲಿ ಹೆಚ್ಚಿನ ಜವಾಬ್ದಾರಿಯೊಂದಿಗೆ ಮಾಹಿತಿ ಕಲೆಹಾಕಿ ಅಭಿವೃದ್ಧಿ ಅಪರ ಆಯುಕ್ತರಿಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಅಭಿವೃದ್ಧಿ ಅಪರ ಆಯುಕ್ತ ದಲ್ಜಿತ್ ಕುಮಾರ್, ಜಂಟಿ ಆಯುಕ್ತರುಗಳಾದ ರಂಗನಾಥ್, ಹೇಮಂತ್ ಶರಣ್,ಮುಖ್ಯ ಅಭಿಯಂತರರಾದ ವಿಜಯಕುಮಾರ್ ಹರಿದಾಸ್, ಸುಗುಣ, ಆರೋಗ್ಯ ವೈದ್ಯಾಾಧಿಕಾರಿ ಶಿವಕುಮಾರ್, ಪಶುಪಾಲನೆ ಸಹಾಯಕ ನಿರ್ದೇಶಕರಾದ ಡಾ.ಎಂ.ಎಚ್. ರೆಡ್ಡಿ, ಡಾ.ಬಸವರಾಜ್, ಕಾರ್ಯಪಾಲಕ ಅಭಿಯಂತರರು, ಪಶು ವೈದ್ಯಾಾಧಿಕಾರಿಗಳು ಇದ್ದರು.


Share It

You cannot copy content of this page