ಬೆಂಗಳೂರು: ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ವಿವಿಧ ರೂಪದ ಅಹವಾಲುಗಳನ್ನು ನೇರವಾಗಿ ಆಲಿಸಿ, ಕ್ರಮ ವಹಿಸುವ ನಿಟ್ಟಿನಲ್ಲಿ, ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಪ್ರತಿ ಶುಕ್ರವಾರ ಫೋನ್-ಇನ್ ಸಂವಾದವನ್ನು ಆರಂಭಿಸಿದ್ದಾರೆ.
ಈ ವಾರದ ಫೋನ್-ಇನ್ ಕಾರ್ಯಕ್ರಮ ಡಿಸೆಂಬರ್ 19 ರಂದು (ಶುಕ್ರವಾರ) ಬೆಳಿಗ್ಗೆ 7 ರಿಂದ 9 ಗಂಟೆಯವರೆಗೆ ನಡೆಯಲಿದ್ದು, ಈ ವೇಳೆ ಸಾರ್ವಜನಿಕರು ರಸ್ತೆ ಗುಂಡಿಗಳು, ದುರಸ್ತಿ, ಬೀದಿ ದೀಪಗಳ ನಿರ್ವಹಣೆ, ಕಸ ಸಂಗ್ರಹಣೆ/ ವಿಲೇವಾರಿ ಸಂಬಂಧಿತ ತೊಂದರೆಗಳು, ಅಪಾಯಕರ ಮರಗಳು ಮತ್ತು ಕೊಂಬೆಗಳ ತೆರವು, ಸೊಳ್ಳೆ ನಿಯಂತ್ರಣ ಕ್ರಮಗಳು, ಬೀದಿ ನಾಯಿಗಳ ನಿಯಂತ್ರಣ, ಉದ್ಯಾನವನಗಳ ಪಾಲನೆ ಮತ್ತು ಸುಧಾರಣೆ, ಅನಧಿಕೃತ ಬ್ಯಾನರ್ ಮತ್ತು ಪೋಸ್ಟರ್‌ಗಳ ತೆರವು, ಪಾದಚಾರಿ ಮಾರ್ಗಗಳ ಒತ್ತುವರಿ ತೆರವು, ಇ-ಖಾತಾ ಸಂಬಂಧಿತ ಪ್ರಶ್ನೆಗಳು ಮತ್ತು ಚರಂಡಿ ಸಮಸ್ಯೆಗಳು ಇತ್ಯಾದಿಗಳ ಬಗ್ಗೆ ಆಯುಕ್ತರ ಜೊತೆ ನೇರವಾಗಿ ಹಂಚಿಕೊಂಡು ಕಾರ್ಯಕ್ರಮದ ಸದುಪಯೋಗವನ್ನು ಪಡೆಯಬಹುದಾಗಿದೆ.
ಸಲ್ಲಿಸಲಾದ ಪ್ರತಿ ದೂರು ಸಹಾಯ 2.0 ಪೋರ್ಟಲ್ ನಲ್ಲಿ ದಾಖಲಾಗಿ ಸಂಬಂಧಿತ ಅಧಿಕಾರಿಗಳಿಗೆ ತಕ್ಷಣ ಕಳುಹಿಸಲಾಗುತ್ತದೆ. ದೂರು ಸ್ವೀಕರಿಸಿದ ಮಾಹಿತಿ ಮತ್ತು ಅಧಿಕಾರಿಯ ವಿವರಗಳು ನಾಗರಿಕರಿಗೆ ಮೆಸೇಜ್ ಮೂಲಕ ದೊರೆಯಲಿದೆ. ನಿಯಂತ್ರಣ ಕೊಠಡಿಯ ಮೊಬೈಲ್ ಮತ್ತು ವಾಟ್ಸಪ್ ಸಂಖ್ಯೆ: 9480685705 ಮತ್ತು ಲ್ಯಾಂಡ್‌ಲೈನ್ ಸಂಖ್ಯೆಗಳು 080-22975936 / 080-23636671 ಆಗಿರಲಿವೆ. ಅದೇ ರೀತಿಯಲ್ಲಿ ನಾಗರಿಕರು ಅಹವಾಲುಗಳನ್ನು ಸಹಾಯ 2.0 ಮೊಬೈಲ್ ಆಪ್ ಮೂಲಕವೂ ಸಲ್ಲಿಸಬಹುದಾಗಿದೆ.
