News

ಕ್ರಿಮಿನಲ್ ಗಳ ಜತೆ ಒಡನಾಟ: ಬೆಂಗಳೂರಿನ ಪಿಎಸ್‌ಐ ಸಸ್ಪೆಂಡ್

Share It

ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಯ ಜತೆಗೆ ಗಾಢ ಸಂಪರ್ಕದಲ್ಲಿದ್ದ ಕಾರಣಕ್ಕೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವೊಬ್ಬರನ್ನು ಅಮಾನತು ಮಾಡಲಾಗಿದೆ.

ರೌಡಿಶೀಟರ್ ದಾಸ ಎಂಬಾತನ ಜತೆ ಸಂಪರ್ಕ ಯಲಹಂಕದ ನ್ಯೂಟೌನ್ ಪೊಲೀಸ್ ಠಾಣೆಯ ಪಿಎಸ್‌ಐ ನಿರಂತರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಈ ಕಾರಣಕ್ಕೆ ಪಿಎಸ್‌ಐ ನಾಗರಾಜ್ ಅವರನ್ನು ಅಮಾನತುಗೊಳಿಸಿ ಆದೇಶ ಮಾಡಲಾಗಿದೆ.

ಡೌಡಿಶೀಟರ್ ದಾಸ ಹಲ್ಲೆ, ಬೆದರಿಕೆ, ಭೂಕಬಳಿಕೆ ಪ್ರಕರಣಗಳು ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಆತನ ಜತೆಗೆ ಪಿಎಸ್‌ಐ ನಾಗರಾಜ್ ಸಂಪರ್ಕದಲ್ಲಿದ್ದು, ಆಗಾಗ ಇಬ್ಬರು ಜತೆಯಾಗಿ ಕಾಣಿಸಿಕೊಂಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.


Share It

You cannot copy content of this page