News

2026 ರಿಂದ ಕೆಲ ಎಕ್ಸ್ ಪ್ರೆಸ್ ರೈಲುಗಳ ಸಂಖ್ಯೆ ಬದಲಾವಣೆ

Share It

ವಿವಿಧ ಮಾರ್ಗಗಳಲ್ಲಿ ಸಂಚರಿಸುವ ಕೆಲವು ಪ್ರಮುಖ ಎಕ್ಸ್ ಪ್ರೆಸ್ ರೈಲುಗಳ ಸಂಖ್ಯೆಯನ್ನು ಮರುನಾಮಕರಣ (Renumbering) ಮಾಡಲು ರೈಲ್ವೆ ಮಂಡಳಿಯು ಅನುಮೋದನೆ ನೀಡಿದೆ. ಈ ಹೊಸ ಬದಲಾವಣೆಗಳು 2026ರ ಫೆಬ್ರವರಿ ತಿಂಗಳಿನಿಂದ ಜಾರಿಗೆ ಬರಲಿದೆ.

ಬೆಳಗಾವಿ–ಮೈಸೂರು ನಡುವೆ ಸಂಚರಿಸುವ ವಿಶ್ವಮಾನವ ದೈನಂದಿನ ಎಕ್ಸ್ ಪ್ರೆಸ್ (17325) ರೈಲು ಫೆಬ್ರವರಿ 20, 2026 ರಿಂದ ಹೊಸ ಸಂಖ್ಯೆ 20675 ರೊಂದಿಗೆ ಸಂಚರಿಸಲಿದೆ. ಹಾಗೆಯೇ ಮೈಸೂರು–ಬೆಳಗಾವಿ (17326) ರೈಲು ಫೆಬ್ರವರಿ 19 ರಿಂದ ಹೊಸ ಸಂಖ್ಯೆ 20676 ರಲ್ಲಿ ಕಾರ್ಯಾಚರಣೆ ನಡೆಸಲಿದೆ.

ಗಾಂಧಿಧಾಮ-ಕೆಎಸ್ಆರ್ ಬೆಂಗಳೂರು ಸಾಪ್ತಾಹಿಕ ಎಕ್ಸ್ ಪ್ರೆಸ್ (16505) ರೈಲು ಫೆಬ್ರವರಿ 24 ರಿಂದ ಜಾರಿಗೆ ಬರುವಂತೆ 20685 ಸಂಖ್ಯೆಯಡಿ ಚಲಿಸಲಿದೆ. ಕೆಎಸ್ಆರ್ ಬೆಂಗಳೂರು-ಗಾಂಧಿಧಾಮ (16506) ರೈಲು ಫೆಬ್ರವರಿ 21 ರಿಂದ 20686 ಸಂಖ್ಯೆಯನ್ನು ಹೊಂದಿರಲಿದೆ.

ಯಶವಂತಪುರ-ಶಿವಮೊಗ್ಗ ಟೌನ್ ದೈನಂದಿನ ಇಂಟರ್ಸಿಟಿ ಎಕ್ಸ್ ಪ್ರೆಸ್ (16579) ಫೆಬ್ರವರಿ 19 ರಿಂದ ಹೊಸ ಸಂಖ್ಯೆ 20689 ರೊಂದಿಗೆ ಹಾಗೂ ಶಿವಮೊಗ್ಗ ಟೌನ್-ಯಶವಂತಪುರ (16580) ರೈಲು ಫೆಬ್ರವರಿ 20 ರಿಂದ ಹೊಸ ಸಂಖ್ಯೆ 20690 ರೊಂದಿಗೆ ಸಂಚರಿಸಲಿವೆ.

ಜೋಧ್’ಪುರ-ಕೆಎಸ್ಆರ್ ಬೆಂಗಳೂರು (16507) ರೈಲು ಫೆಬ್ರವರಿ 26 ರಿಂದ 20693 ಸಂಖ್ಯೆಯೊಂದಿಗೆ ಮತ್ತು ಕೆಎಸ್ಆರ್ ಬೆಂಗಳೂರು-ಜೋಧ್’ಪುರ (16508) ರೈಲು ಫೆಬ್ರವರಿ 23 ರಿಂದ ಜಾರಿಗೆ ಬರುವಂತೆ 20694 ಹೊಸ ಸಂಖ್ಯೆಯೊಂದಿಗೆ ಸಂಚರಿಸಲಿದೆ.


Share It

You cannot copy content of this page