ಟಿಪ್ಪರ್‌ಗೆ ಡಿಕ್ಕಿ ಹೊಡೆದ ಪರಿಣಾಣ ಬೈಕ್ ನಲ್ಲಿ ಸವಾರಿ ಮಾಡುತ್ತಿದ್ದ ಇಬ್ಬರು ಸಹೋದರರು ಸೇರಿದಂತೆ ಒಂದೇ ಗ್ರಾಮದ ನಾಲ್ವರು ಯುವಕರು ಸಾವನ್ನಪ್ಪಿದ್ದಾರೆ.
ಚಿಕ್ಕಬಳ್ಳಾಪುರದ ಅಜ್ಜವಾರ ಗೇಟ್ ಬಳಿ ದುರ್ಘಟನೆ ಸಂಭವಿಸಿದೆ. ಮೃತರನ್ನು ನರಸಿಂಹಮೂರ್ತಿ (27), ನಂದೀಶ್ (25), ಅರುಣ್ (18), ಮನೋಜ್ (19) ಎಂದು ಗುರುತಿಸಲಾಗಿದ್ದು, ಇವರಲ್ಲಿ ನರಸಿಂಹಮೂರ್ತಿ ಮತ್ತು ನಂದೀಶ್ ಎಂಬುವರು ಸಹೋದರರಾಗಿದ್ದಾರೆ. ಅಪಘಾತದ ಸ್ಥಳದಲ್ಲೇ ನಾಲ್ವರೂ ಸಾವನ್ನಪ್ಪಿದ್ದು, ಮೃತ ಯುವಕರೆಲ್ಲರೂ ಅಜ್ಜವಾರ ಗ್ರಾಮದವರು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮೃತರೆಲ್ಲರೂ ಒಂದೇ ಗ್ರಾಮದ ಯುವಕರು. ಒಂದೇ ಬೈಕಿನಲ್ಲಿ ನಾಲ್ವರೂ ಪ್ರಯಾಣಿಸುತ್ತಿದ್ದರು. ಚಿಕ್ಕಬಳ್ಳಾಪುರದಿಂದ ಅಜ್ಜವಾರ ಗ್ರಾಮಕ್ಕೆ ಬರುವ ವೇಳೆ ಶಿಡ್ಲಘಟ್ಟದಿಂದ ಚಿಕ್ಕಬಳ್ಳಾಪುರದ ಕಡೆಗೆ ಬರುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕಿನಲ್ಲಿದ್ದ ಯುವಕರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಸಂಭವಿಸಿದೆ ಎಂದರು.
ಘಟನೆ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಟಿಪ್ಪರ್ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಸಂಚಾರಿ ನಿಯಮದ ಉಲ್ಲಂಘನೆಯಾಗಿರುವುದು ಕಂಡುಬಂದಿದೆ. ಆದರೆ, ತಪ್ಪು ಯಾರದ್ದು ಎಂಬುದು ತಿಳಿದು ಬಂದ ನಂತರ ಕಾನೂನು ಕ್ರಮ ಜರುಗಿಲಾಗುವುದು ಎಂದು ಚಿಕ್ಕಬಳ್ಳಾಪುರ ಎಸ್ಪಿ ಮಾಹಿತಿ ನೀಡಿದ್ದಾರೆ.
