ಉಪಯುಕ್ತ ಮಾಹಿತಿ-ಸಂಕ್ಷಿಪ್ತ ಸುದ್ದಿಗಳನ್ನು ಪ್ರಕಟಿಸುವ ಮೂಲಕ ಲಕ್ಷಾಂತರ ಓದುಗರ ನಂಬಿಕೆಗೆ ಪಾತ್ರವಾಗಿರುವ ‘ಇನ್ಫೋ ಟೈಮ್’ ಗೆ ಭಾಷಾಂತರಕಾರರು ಹಾಗೂ ಲೇಖಕರು ಬೇಕಾಗಿದ್ದಾರೆ.
ಬರವಣಿಗೆಯಲ್ಲಿ ಆಸಕ್ತಿ ಇದ್ದು ಸಮಾಜಮುಖಿ ಚಿಂತನೆ ಹೊಂದಿರುವ, ಮುಖ್ಯವಾಗಿ ಶ್ರೀಸಾಮಾನ್ಯರಿಗೆ ಉಪಯೋಗಕ್ಕೆ ಬರುವಂತಹ ಶಿಕ್ಷಣ, ಆರೋಗ್ಯ, ಉದ್ಯೋಗ, ಸರ್ಕಾರಿ ಸೇವೆಗಳು, ಕಾನೂನು, ಕೃಷಿ, ವಾಣಿಜ್ಯ, ಸಂಶೋಧನೆ, ಪ್ರವಾಸ, ಆಧ್ಯಾತ್ಮ ಮತ್ತಿತರೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವಿವರವಾಗಿ ಲೇಖನಗಳನ್ನು ಬರೆಯಬಲ್ಲವರಿಗೆ ಆದ್ಯತೆ ನೀಡಲಾಗುವುದು.
ಅರ್ಹತೆ: ಕನ್ನಡದಲ್ಲಿ ತಪ್ಪಿಲ್ಲದೆ ಬರೆಯುವ ಸಾಮರ್ಥ್ಯವಿರಬೇಕು. ಬರವಣಿಗೆಯಲ್ಲಿ ಆಸಕ್ತಿ ಹೊಂದಿರಬೇಕು. ಸಾಮಾನ್ಯ ಓದುಗರಿಗೂ ಸರಳವಾಗಿ ಅರ್ಥವಾಗುವಂತೆ ಬರೆಯಬೇಕು. ಭಾಷಾಂತರಕಾರರು ನಿಗದಿತ ಅವಧಿಯಲ್ಲಿ ಭಾಷಾಂತರಿಸಿ ನೀಡಬೇಕು.
ಸಂಭಾವನೆ: ಭಾಷಾಂತರಕಾರರಿಗೆ ಶ್ರಮಕ್ಕೆ ತಕ್ಕಂತೆ ಸಂಭಾವನೆ ನೀಡಲಾಗುವುದು. ಪ್ರತಿ ಭಾಷಾಂತರಿಸಿದ ಲೇಖನಕ್ಕೆ ಕನಿಷ್ಟ ₹50 ರಿಂದ ಗರಿಷ್ಟ ₹2,000 ವರೆಗೆ ಸಂಭಾವನೆ ನೀಡಲಾಗುವುದು. ನಿರ್ದಿಷ್ಟ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುವ ಲೇಖಕರಿಗೆ ಹೆಚ್ಚಿನ ಗೌರವಧನ ನೀಡಲಾಗುವುದು. ಆಸಕ್ತರು ತಮ್ಮ ಸ್ವವಿವರವನ್ನು infotime2025@gmail.com ಗೆ ಕಳುಹಿಸಬಹುದು.
ತನಿಖಾ ಪತ್ರಿಕೋದ್ಯಮದಲ್ಲಿ ಆಸಕ್ತಿ ಉಳ್ಳವರು ಮತ್ತು ವರದಿಗಾರರಾಗಲು ಇಚ್ಚಿಸುವವರು ಕೂಡ ತಮ್ಮ ಸ್ವವಿವರ ಕಳುಹಿಸಬಹುದು.
