Law

ಅಂತರ್ಜಾತಿ ವಿವಾಹಕ್ಕೆ ಇನ್ನಿಲ್ಲ ಅಡ್ಡಿ: ಕಾನೂನಿನ ಪ್ರಮುಖ ಅಂಶಗಳು ಇಲ್ಲಿವೆ

Share It

ಕರ್ನಾಟಕ ಸರ್ಕಾರವು ಅಂತರ್ಜಾತಿ ವಿವಾಹಿತರನ್ನು ರಕ್ಷಿಸಲು “ಇವ ನಮ್ಮವ” ವಿಧೇಯಕವನ್ನು ಮಂಡಿಸಿದೆ. ಈ ಕಾಯ್ದೆಯು ಅಂತರ್ಜಾತಿ ವಿವಾಹದ ಜೋಡಿಗಳ ವಿರುದ್ಧ ಸಾಮಾಜಿಕ ಬಹಿಷ್ಕಾರ, ಆರ್ಥಿಕ ಕಿರುಕುಳ ಮತ್ತು ಕೊಲೆಯಂತಹ ಘಟನೆಗಳನ್ನು ತಡೆಯುವ ಗುರಿ ಹೊಂದಿದೆ. ಇದು ಜಾತಿ ಶ್ರೇಣೀಕರಣದ ಹೆಸರಿನಲ್ಲಿ ನಡೆಯುವ ಹಿಂಸೆಯನ್ನು ನಿಷೇಧಿಸಿ, ವಿವಾಹಿತರಿಗೆ ಕಾನೂನು ರಕ್ಷಣೆ ನೀಡುತ್ತದೆ ಮತ್ತು ಅಂತರ್ಜಾತಿ ವಿವಾಹಗಳಿಗೆ ಹೆಚ್ಚಿನ ಮಾನ್ಯತೆ ನೀಡುತ್ತದೆ.

ವಿಧೇಯಕದ ಪ್ರಮುಖ ಅಂಶಗಳು:
• ಅಂತರ್ಜಾತಿ ಮದುವೆಯಾದ್ರೆ ಸಾಮಾಜಿಕ, ಆರ್ಥಿಕ ಬಹಿಷ್ಕಾರ ಹಾಕುವಂತಿಲ್ಲ
• ಸಂಬಂಧಿಸಿದ ಜೋಡಿ ವಾಸಸ್ಥಳದಿಂದ ಹೊರಹೋಗುವಂತೆ ಒತ್ತಾಯಿಸುವುದು ಅವರ ಕುಟುಂಬವನ್ನು ಹೊರಹಾಕುವುದು ಕಾನೂನು‌ಬಾಹಿರ
• ಜಾತಿ, ಇಲ್ಲವೆ ಸಮುದಾಯದಲ್ಲಿ ಬಲವಂತವಾಗಿ ಸಂಪ್ರದಾಯ ಹೇರುವಂತಿಲ್ಲ
• ಅಂತರ್ಜಾತಿ ವಿವಾಹಿತರಿಗೆ ಪೂಜಾ ಸ್ಥಳಗಳಿಗೆ ಪ್ರವೇಶ ನಿರಾಕರಿಸುವಂತಿಲ್ಲ
• ಅಂತರ್ಜಾತಿ ವಿವಾಹಿತರಿಂದ ಕುಟುಂಬದ ಆಸ್ತಿ, ದಂಡಹಾಕುವಂತಿಲ್ಲ
• ಕೆಲಸಕ್ಕೆ ಅಡ್ಡಿ, ಕೆಲಸ ಕೊಡಲು ಹಿಂದೇಟು ಹಾಕುವುದು ಅಪರಾಧ
• ಅಂರ್ಜಾತಿ ವಿವಾಹವಾಗಲು ಅವರ ಕುಟುಂಬಸ್ಥರು ವಿರೋಧಿಸುವಂತಿಲ್ಲ
• ಇಬ್ಬರು ವಯಸ್ಕರ ವಿವಾಹಕ್ಕೆ ಪೋಷಕರ ಒಪ್ಪಿಗೆ ಅಗತ್ಯವಿಲ್ಲ
• ವಿವಾಹಿತ ಜೋಡಿಗೆ ಹಿಂಸೆ, ಮಾನಸಿಕ ನಿಂದನೆ ಕಾನೂನು‌ಬಾಹಿರ
• ದಂಪತಿಯನ್ನು ಬಲವಂತವಾಗಿ ದೂರ ಇಡುವ ಪ್ರಯತ್ನ ಸರಿಯಲ್ಲ. ಮದುವೆಯಾದ ಜೋಡಿಯನ್ನ ಕಿಡ್ನ್ಯಾಪ್ ಮಾಡುವುದು, ಆರ್ಥಿಕ‌ ಬಹಿಷ್ಕಾರ ಹಾಕುವುದು ಕಾನೂನು‌ಬಾಹಿರ
• ದಂಪತಿಗೆ ಸಹಕಾರ ಕೊಟ್ಟವರ ಬಹಿಷ್ಕಾರ ಮಾಡುವುದು ಸರಿಯಲ್ಲ
• ಬ್ಯಾಂಕ್ ಖಾತೆ ಸ್ಥಗಿತ, ಉದ್ಯೋಗ ಕೊಟ್ಟವರ ಮೇಲೆ ಒತ್ತಡ ಅಪರಾಧ
• ಲೈಂಗಿಕ‌ ಹಿಂಸೆ ನೀಡುವುದು, ಕಿರುಕುಳ ನೀಡುವುದು ಅಪರಾಧ
• ಬಲವಂತದ ಗರ್ಭಪಾತ ಗರ್ಭಸ್ರಾವಕ್ಕೆ ಒತ್ತಡ ಹೇರುವುದು ಅಪರಾಧ
• ಅಂತರ್ಜಾತಿ ವಿವಾಹವಾದವರ ಬೇರ್ಪಡಿಸಿ ಬೇರೆ ಮದುವೆ ಮಾಡಿಸುವಂತಿಲ್ಲ. ಒಂದು ವೇಳೆ ಮರ್ಯಾದಾ ಹತ್ಯೆ ಮಾಡಿದರೆ 5 ವರ್ಷ ಜೈಲು, ದಂಡ. ದಂಪತಿಯನ್ನು ಗಾಯಗೊಳಿಸಿದ್ರೂ 3 ಲಕ್ಷ ದಂಡ, 3 ವರ್ಷ ಜೈಲು
• ದಂಪತಿಯನ್ನು ಬೆದರಿಸಿದರೆ 5 ವರ್ಷ ಶಿಕ್ಷೆ, 2 ಲಕ್ಷ ರೂಪಾಯಿ ದಂಡ. ನಿರಂತರ ಬೆದರಿಕೆಗೆ 7 ವರ್ಷಗಳವರೆಗೆ ಶಿಕ್ಷೆ ವಿಸ್ತರಣೆ ಮಾಡಬಹುದು
• ವಿವಾಹಿತ ಜೋಡಿ ವಿಚಾರದಲ್ಲಿ ಸಾಕ್ಷಿಗಳ ಗುರುತು, ವಿಳಾಸ ನೀಡುವಂತಿಲ್ಲ


Share It

You cannot copy content of this page