ಪುಣೆ: ಹಿಂಜೇವಾಡಿಯಿಂದ ನಾನಾ ಪೇಟ್ ಹೋಗುವ ವೇಳೆ ಪ್ರಯಾಣ ದರದ ವಿಚಾರದಲ್ಲಿ ಉಂಟಾದ ವಾದ ವಿವಾದದ ವೇಳೆ ಕ್ಯಾಬ್ ಚಾಲಕನೊಬ್ಬ ಟೆಕ್ಕಿಗೆ ಎಡಗೈ ಬೆರಳನ್ನು ಕಚ್ಚಿ ಭಾಗಶಃ ತುಂಡಾಗಿರಿಸಿರುವ ಘಟನೆ ವರದಿಯಾಗಿದೆ.
ಹಿಂಜೆವಾಡಿ ಐಟಿ ಪಾರ್ಕ್ ನ ಹಂತ I ರಲ್ಲಿರುವ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ 42 ವರ್ಷದ ಟೆಕ್ಕಿ, ಶಿಫ್ಟ್ ಮುಗಿದ ನಂತರ ನಾನಾ ಪೇಟ್ ನಲ್ಲಿರುವ ತನ್ನ ಮನೆಗೆ ಹೋಗಲು ರಾಪಿಡೋ ಕ್ಯಾಬ್ ಬುಕ್ ಮಾಡಿದ್ದಾರೆ. ಸ್ಥಳಕ್ಕೆ ಬಂದ ಚಾಲಕ ಪ್ರಯಾಣ ಆರಂಭಿಸುವ ಮೊದಲೇ ದರದ ಕುರಿತು ವಿವಾದ ಆರಂಭಿಸಿದ್ದಾರೆ, ಪ್ರಯಾಣ ದರವು ಮೀಟರ್ ಪ್ರಕಾರ ಇರುತ್ತದೆ, ಆ್ಯಪ್‌ನಲ್ಲಿ ತೋರಿಸಿರುವಂತೆ ಅಲ್ಲ ಎಂದು ಗಲಾಟೆ ಮಾಡಿದ್ದಾನೆ.
ಪ್ರಯಾಣಿಕ ಐಟಿ ಉದ್ಯೋಗಿ ದರದ ಕುರಿತು ಒಪ್ಪಿಗೆ ಸೂಚಿಸದಿದ್ದಾಗ ಕೋಪಕ್ಕೆ ಚಾಲಕ ಬೆರಳನ್ನು ಕಚ್ಚಿ ಭಾಗಶಃ ಕಚ್ಚಿ ತುಂಡಾಗಿಸಿದ್ದಾನೆ.
