News

ಕರ್ನಾಟಕ, ಆಂಧ್ರ ಬಸ್ ಗಳ ಪೈಪೋಟಿಗೆ 8 ವರ್ಷದ ಬಾಲಕಿ ಸಮೇತ ಸೋದರ ಮಾವನ ದಾರುಣ ಸಾವು

Share It

ದೊಡ್ಡಬಳ್ಳಾಪುರ: ಕರ್ನಾಟಕ ಹಾಗೂ ಆಂಧ್ರ ಸಾರಿಗೆ ಬಸ್ ಗಳು ನಾನಾ ನೀನಾ ಅಂತ ಪೈಪೋಟಿಗೆ ಬಿದ್ದ ಹಿನ್ನೆಲೆ, ಎರಡು ಅಮಾಯಕ ಜೀವಗಳು ಬಲಿಯಾಗಿರುವ ಘಟನೆ ತಾಲೂಕಿನ ಗೊಲ್ಲಹಳ್ಳಿ – ತಪಸೀಹಳ್ಳಿ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ.

ಎರಡು ಬಸ್ ಗಳ ನಡುವೆ ಸಿಲುಕಿದ ಬೈಕ್ ಸವಾರ ಅಪಘಾತಕ್ಕೀಡಾಗಿದ್ದಾನೆ 8 ವರ್ಷದ ತಂಗಿಯ ಮಗಳ ಜೊತೆಯಲ್ಲಿ ತಾನು ಕೂಡ ಸಾವನ್ನಪ್ಪಿದ್ದಾನೆ.

ವೆಂಕಟೇಶ್ ಮೂರ್ತಿ (31 ವರ್ಷ) ಮೃತ ವ್ಯಕ್ತಿ, ತನ್ನ ಬೈಕ್ ನಲ್ಲಿ 8 ವರ್ಷದ ತಂಗಿಯ ಮಗಳೊಂದಿಗೆ ದೊಡ್ಡಬಳ್ಳಾಪುರಕ್ಕೆ ಬರುತ್ತಿದ್ದ ಈ ವೇಳೆ ದಾರಿಯಲ್ಲಿ
ಮತ್ತೊರ್ವ ಮಹಿಳೆ ಹಾಗೂ ಮಗು ಡ್ರಾಪ್ ಕೇಳಿದ್ದಾರೆ. ಅವರನ್ನು ಕೂಡ ಬೈಕ್ ನಲ್ಲಿ‌ ಅತ್ತಿಸಿಕೊಂಡು ಹಿಂದೂಪುರ – ಬೆಂಗಳೂರು ನಡುವಿನ ರಾಜ್ಯ ಹೆದ್ದಾರಿಯಲ್ಲಿ ಬರುವ ವೇಳೆ ಹಿಂದೂಪುರದಿಂದ ಬೆಂಗಳೂರಿಗೆ ಪೈಪೋಟಿಯಲ್ಲಿ ಬರ್ತಿದ್ದ ಕೆಎಸ್ ಆರ್ ಟಿ ಸಿ ಬಸ್ ಹಾಗೂ ಎಪಿಎಸ್‍ಆರ್‍ಟಿಸಿ ಬಸ್ ಗಳ ಮಧ್ಯೆ ಬೈಕ್ ಸವಾರ ಸಿಲುಕಿದ್ದಾನೆ.

ಮೊದಲು ಎಪಿಎಸ್‍ಆರ್‍ಟಿಸಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದು‌ ಆತ ಕೇಳಗೆ ಬಿದ್ದಿದ್ದಾನೆ ನಂತರ ಹಿಂಬದಿ ಒವರ್ ಟೇಕ್ ಮಾಡುತ್ತಿದ್ದ ಕೆಎಸ್ಆರ್ಟಿ ಸಿ ಬಸ್ ಬೈಕ್ ಮೇಲೆ ಹರಿದಿದೆ. ಪರಿಣಾಮ ಬೈಕ್ ಸವಾರ ವೆಂಕಟೇಶ್ ತಲೆಯ ಮೇಲೆ ಚಕ್ರ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹಿಂಬದಿ ಕೂತಿದ್ದ 8 ವರ್ಷದ ಮೋಕ್ಷ ತಲೆಗೆ ಗಂಭೀರವಾದ ಗಾಯವಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾಳೆ.

ಉಳಿದಂತೆ ಡ್ರಾಪ್ ಕೇಳಿದ ಓಂ ಶಕ್ತಿ ಮಾಲಾಧಾರಿ ನರಸಮ್ಮ ಹಾಗೂ ಲಾವಣ್ಯ ಎನ್ನುವ ಮಗುವಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಅಪರ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಕುಮಾರ್, ಡಿವೈಎಸ್ಪಿ ರವಿ, ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ಸೇರಿದಂತೆ ಸಾರಿಗೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಎರಡು ಬಸ್ ಗಳನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Share It

You cannot copy content of this page