ರಾಜ್ಯದಲ್ಲಿ ಮಧ್ಯಪ್ರಿಯರಿಗೆ ಮತ್ತೊಮ್ಮೆ ಸರ್ಕಾರ ಶಾಕ್ ಕೊಟ್ಟಿದ್ದು. ಬಿಯರ್ ಪ್ರಿಯರ ಕಂಗೆಣ್ಣಿಗೆ ಗುರಿಯಾಗಿದೆ. ರಾಜ್ಯಾದ್ಯಂತ ಬಿಯರ್ ಬೆಲೆ ಸೋಮವಾರದಿಂದಲೇ ಹೆಚ್ಚಳವಾಗಿದೆ.
ಪ್ರತಿಬಾರಿ ಸರ್ಕಾರದ ಬಜೆಟ್ ನಲ್ಲಿ ಮಧ್ಯದ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಪರಿಷ್ಕರಿಸಲಾಗುತ್ತದೆ. ಆದರೆ ಈ ಬಾರಿ ಸರ್ಕಾರ ಬಜೆಟ್ ಮಂಡನೆಗೂ ಮುನ್ನವೇ ಮಧ್ಯದ ಹೆಚ್ಚುವರಿ ಅಬಕಾರಿ ಸುಂಕ ಹೆಚ್ಚಳ ಮಾಡಿದೆ.
ರಾಜ್ಯದಲ್ಲಿ ಮಧ್ಯದ ಮೇಲಿನ ಸುಂಕ ಹೆಚ್ಚಿಸಿದ ಹಿನ್ನೆಲೆ ಪ್ರತಿ ಬಿಯರ್ ಬಾಟಲಿನ ದರವು ಕನಿಷ್ಠ 10 ರಿಂದ 50 ರೂ. ವರೆಗೆ ಹೆಚ್ಚಳ ಮಾಡಲಾಗಿದೆ. ಅಷ್ಟೇ ಅಲ್ಲದೇ ಯಾವ ಮಧ್ಯದ ಬಾಟಲಿಯಲ್ಲಿ ಆಲ್ಕೋ ಹಾಲ್ ಪ್ರಮಾಣ ಅಧಿಕಾವಾಗಿದೆಯೋ ಅಂತಹ ಮಧ್ಯದ ಬೆಲೆ ಗಣನೀಯವಾಗಿ ಏರಿಕೆ ಮಾಡಲಾಗಿದೆ. ಸಾಮಾನ್ಯ ವ್ಯಕ್ತಿಗೆ ಕೈಗೆಟಕುವ 300 ರೂ. ಬೆಲೆಯ ಬಿಯರ್ ಗಳ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಳೆದ ಒಂದು ವರ್ಷದಲ್ಲಿ ಇದು ಮೂರನೇ ಬಾರಿಗೆ ಮಧ್ಯದ ಬೆಲೆ ಏರಿಕೆಯಾಗಿದೆ. ಕಳೆದ ವರ್ಷ ಬಿಯರ್ ಉತ್ಪಾದನಾ ಕಂಪನಿಗಳು ಹೆಚ್ಚುತ್ತಿರುವ ಉತ್ಪಾದನಾ ವೆಚ್ಚವನ್ನ ಸರಿದೂಗಿಸಲು ಬಿಯರ್ ಬಾಟಲ್‌ಗಳ ದರ ಏರಿಕೆ ಮಾಡಿದ್ದರು. ಅದಾದ ನಂತರದ ದಿನಗಳಲ್ಲಿ ಅಂದರೆ 2023 ರ ಫೆ.1 ರಂದು
ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಐಎಂಎಲ್ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು (ಎಇಡಿ) ಶೇ.20 ಮತ್ತು ಬಿಯರ್ ಮೇಲಿನ ಎಇಡಿಯನ್ನು ಶೇ 185ರಿಂದ 195ಕ್ಕೆ ಹೆಚ್ಚಳ ಮಾಡಿತ್ತು. ಆಗ ಬಿಯರ್ ಬೆಲೆ ಶೇ.10ರಷ್ಟು ಹೆಚ್ಚಾಗಿತ್ತು. ಇನ್ನು ಅಬಕಾರಿ ಇಲಾಖೆಯಿಂದ ನಿರೀಕ್ಷಿತ ಆದಾಯ ಸರ್ಕಾರಕ್ಕೆ ಬರದ ಹಿನ್ನೆಲೆ ಆದಾಯದ ಗುರಿ ತಲುಪಲು ಬಜೆಟ್ ಗೆ ಮುನ್ನವೇ ಸರ್ಕಾರ ಬಿಯರ್ ದರ ಹೆಚ್ಚಳ ಮಾಡಿದೆ ಎಂದು ಮಾಹಿತಿ ಸಿಕ್ಕಿದೆ.