News

ಏರೋ ಇಂಡಿಯಾ-2025: ಜಿಕೆವಿಕೆಯಲ್ಲಿ ಫ್ರೀ ಪಾರ್ಕಿಂಗ್, ಐಎಎಫ್ ತಲುಪಲು ಉಚಿತ ಬಿಎಂಟಿಸಿ ಬಸ್ ವ್ಯವಸ್ಥೆ

Share It

ಬೆಂಗಳೂರು: ಯಲಹಂಕ ವಾಯುಸೇನಾ ನೆಲೆಯಲ್ಲಿ ಜರಗುವ ಪ್ರತಿಷ್ಠಿತ ಏರೋ ಇಂಡಿಯಾ-2025 ಪ್ರದರ್ಶನ ವೀಕ್ಷಿಸಲು ಫೆಬ್ರವರಿ 13 ಮತ್ತು 14 ರಂದು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಈ ಎರಡು ದಿನ ಜಿಕೆವಿಕೆ ಒಳಗೆ ಫ್ರೀ ಪಾರ್ಕಿಂಗ್ ಇರಲಿದ್ದು ಅಲ್ಲಿಂದ ಐಎಎಫ್‍ಗೆ ತಲುಪಲು ಉಚಿತ ಬಿಎಂಟಿಸಿ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ವಾಹನಗಳನ್ನು ಪಾರ್ಕಿಂಗ್ ಮಾಡಿದ ನಂತರ ಜಿಕೆವಿಕೆ ಕೃಷಿಮೇಳ ಮೈದಾನದಿಂದ ಐಎಎಫ್‍ಗೆ ಉಚಿತ ಬಿಎಂಟಿಸಿ ಬಸ್ ಮೂಲಕ ಪ್ರಯಾಣಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.

ಏರೋ ಇಂಡಿಯಾ ಟಿಕೆಟ್ ಮತ್ತು ಪಾಸ್ ಹೊಂದಿರುವವರು ಉಚಿತವಾಗಿ ಅವಕಾಶ ಕಲ್ಪಿಸಿರುವ ಜಿಕೆವಿಕೆ ಕೃಷಿಮೇಳ ಮೈದಾನದಲ್ಲಿ ತಮ್ಮ ವಾಹನಗಳನ್ನು ನಿಲುಗಡೆ ಮಾಡಿ ಜಿಕೆವಿಕೆನಿಂದ ಐ.ಎ.ಎಫ್ (ವಾಯು ಪಡೆ ನಿಲ್ದಾಣ) ವರೆಗೆ ಉಚಿತ ಬಿಎಂಟಿಸಿ ಬಸ್ ವ್ಯವಸ್ಥೆಯನ್ನು ಬಳಸಬಹುದು ಎಂದು ಬೆಂಗಳೂರು ನಗರ ಸಂಚಾರ ಜಂಟಿ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತ್ ಅವರು ಕೂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share It

You cannot copy content of this page