News

ಇನ್ಮುಂದೆ ಜನರಿಗೆ ಸಿಗಲಿದೆ ಕ್ಯೂ ಆರ್ ಕೋಡ್ ಮೂಲಕ ನಮ್ಮ ಕ್ಲಿನಿಕ್ ಗಳ ಮಾಹಿತಿ

Share It

ಬೆಂಗಳೂರು: ಬಿಬಿಎಂಪಿ ನಮ್ಮ ಕ್ಲಿನಿಕ್ ಗಳ ಬಗ್ಗೆೆ ಜನರಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಂಡಿದ್ದು, ಕ್ಯೂ ಆರ್ ಕೋಡ್ ಮೂಲಕ ಮಾಹಿತಿ ನೀಡಲು ಮುಂದಾಗಿದೆ.

ನಮ್ಮ ಕ್ಲಿನಿಕ್‌ಗಳ ಬಗ್ಗೆೆ ಜನರಲ್ಲಿ ಅರಿವು ಮೂಡಿಸುವುದರ ಜತೆಗೆ, ಅವುಗಳ ಸೇವೆ ಸುಧಾರಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಳ್ಳಲು ಬಿಬಿಎಂಪಿ ತಂತ್ರಜ್ಞಾನದ ಮೊರೆ ಹೋಗಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಎಂಟು ವಲಯಗಳಲ್ಲಿ ನಮ್ಮ ಕ್ಲಿನಿಕ್‌ಗಳನ್ನು ಜನರ ಬಳಕೆಗೆ ಸಿಗುವಂತೆ ಮಾಡಲು ಪಾಲಿಕೆ ಆರೋಗ್ಯ ವಿಭಾಗ ಪ್ರತಿ ವಾರ್ಡ್‌ನಲ್ಲೂ ಕ್ಯೂಆರ್ ಕೋಡ್ ಅಳವಡಿಸಲು ಸಜ್ಜಾಗಿದೆ.

ನಮ್ಮ ಕ್ಲಿನಿಕ್‌ಗಳ ಬಗ್ಗೆೆ ಜನರಿಗೆ ಅರಿವು ಕೂಡ ಕಡಿಮೆ ಇರುವುದರಿಂದ ಜನರು ಅವುಗಳನ್ನು ಬಳಕೆ ಮಾಡಲು ಮುಂದಾಗುತ್ತಿಲ್ಲ. ಈ ಹಿನ್ನೆೆಲೆ ಕ್ಯೂಆರ್ ಕೋಡ್ ಮೂಲಕ ಆಯಾ ವಾರ್ಡ್‌ಗಳಲ್ಲಿ ನಮ್ಮ ಕ್ಲಿನಿಕ್ ಎಲ್ಲಿದೆ, ಅಲ್ಲಿ ಸಿಗುವ ಸೌಲಭ್ಯಗಳ ಬಗ್ಗೆೆ ಜನರಿಗೆ ಮಾಹಿತಿ ಸಿಗಲಿದೆ. ವಾರ್ಡ್‌ಗಳಲ್ಲಿರುವ ನಮ್ಮ ಕ್ಲಿನಿಕ್‌ಗಳಲ್ಲಿ ಏನೆಲ್ಲ ಸೌಲಭ್ಯ ಸಿಗಲಿದೆ ಎಂಬ ಬಗ್ಗೆೆ ಪಾಲಿಕೆ ಜನರಿಗೆ ಮಾಹಿತಿ ಒದಗಿಸಲಿದೆ. ಕ್ಯೂಆರ್ ಕೋಡ್ ನಲ್ಲಿ ಆಯಾ ವಲಯದಲ್ಲಿರುವ ನಮ್ಮ ಕ್ಲಿನಿಕ್‌ಗಳಲ್ಲಿ ಇರುವ ವೈದ್ಯರ ಮಾಹಿತಿ, ವೈದ್ಯರ ಫೋಟೋವನ್ನು ಪ್ರಕಟಿಸುವ ಮೂಲಕ ಜನರಿಗೆ ಕ್ಲಿನಿಕ್ ಬಳಕೆ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸಲಿದೆ.

ನಮ್ಮ ಕ್ಲಿನಿಕ್‌ಗಳಲ್ಲಿ ವಾರಕ್ಕೆ ಒಮ್ಮೆ ಯೋಗ ನಡೆಸುವ ಮೂಲಕ ಜನರ ಗಮನ ಸೆಳೆಯಲು ಕೂಡ ಪಾಲಿಕೆ ಯೋಜನೆ ರೂಪಿಸಿತ್ತು. ಇದಾದ ಬಳಿಕ ಇದೀಗ ಕ್ಯೂಆರ್ ಕೋಡ್ ಮೂಲಕ ನಮ್ಮ ಕ್ಲಿನಿಕ್‌ಗಳನ್ನು ಸಮರ್ಪಕವಾಗಿ ಜನರ ಬಳಕೆಗೆ ಸಿಗುವಂತೆ ಮಾಡಲು ಪಾಲಿಕೆ ಮುಂದಾಗಿರುವುದು ಉತ್ತಮ ಬೆಳವಣಿಗೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.


Share It

You cannot copy content of this page