ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನಕ್ಕೆ ಕೊಡುಗೆಯಾಗಿ ಬಂದಿರುವ ಆಂಬ್ಯುಲೆನ್ಸ್, ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೂ ಪ್ರಯೋಜನ ಒದಗಿಸಲಿದೆ. ಅಲ್ಲಿನ ಸಿಬ್ಬಂದಿಗಳಿಗೆ ತುರ್ತು ಆರೋಗ್ಯ ಸೇವೆಯ ಅಗತ್ಯವಿದ್ದಾಗ ಆಸ್ಪತ್ರೆಗೆ ಕರೆ ತರಲು ಆಂಬ್ಯುಲೆನ್ಸ್ ವಾಹನ ನೆರವಾಗಲಿದೆ.
ವಿಕಾಸಸೌಧದ ಗಾಂಧೀ ಪ್ರತಿಮೆ ಬಳಿ ಗುರುವಾರ ಬೆಂಗಳೂರಿನ ಕಾವೇರಿ ಆಸ್ಪತ್ರೆಯ ಸಮೂಹ ಬನ್ನೇರುಘಟ್ಟ ಉದ್ಯಾನಕ್ಕೆ ಕೊಡುಗೆಯಾಗಿ ನೀಡಿತು. ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ವಾಹನವನ್ನು ಸ್ವೀಕರಿಸಿದರು. ತುರ್ತು ಆರೋಗ್ಯ ಸಂದರ್ಭದಲ್ಲಿ ಸ್ಥಳೀಯ ಪಂಚಾಯ್ತಿ ವ್ಯಾಪ್ತಿಯ ನಿವಾಸಿಗಳಿಗೆ, ಉದ್ಯಾನದ ಸಿಬ್ಬಂದಿಗೆ ಮತ್ತು ಪ್ರವಾಸಿಗರಿಗೆ ಈ ಆಂಬ್ಯುಲೆನ್ಸ್ ನ ನೆರವು ದೊರೆಯಲಿದೆ.
ಬನ್ನೇರುಘಟ್ಟ ಬೆಂಗಳೂರು ಬಳಿಯೇ ಇರುವ ದೊಡ್ಡ ಕಾನನ ಪ್ರದೇಶವಾಗಿದ್ದು, 1970ರಲ್ಲಿ ಉದ್ಯಾನವನ್ನಾಗಿ ಪರಿವರ್ತಿಸಲಾಯಿತು. 1974ರಲ್ಲಿ ರಾಷ್ಟ್ರೀಯ ಉದ್ಯಾನ ಎಂದು ಘೋಷಿಸಲಾಯಿತು. ಪ್ರಸ್ತುತ ಇಲ್ಲಿ ಮೃಗಾಲಯ, ಚಿಟ್ಟೆ ಪಾರ್ಕ್, ಕರಡಿ ಸಫಾರಿ, ಹುಲಿ ಸಫಾರಿ, ಸಿಂಹ ಸಫಾರಿ ಇದ್ದು, ಇತ್ತೀಚೆಗೆ ತಾವೇ ಚಿರತೆ ಸಫಾರಿ ಸಹ ಉದ್ಘಾಟನೆಯಾಗಿದೆ ಇದು ಪ್ರವಾಸಿಗರಿಗೆ ಜನಾಕರ್ಷಣೆ ಕೇಂದ್ರವಾಗಿದೆ.