News

ಫೆಬ್ರವರಿ 20 ರಂದು ನಗರದ ಹಲವು ಪ್ರದೇಶಗಳಲ್ಲಿ ನೆಡೆಯಲಿದೆ ಜಲ ಮಂಡಳಿಯ ನೀರಿನ ಅದಾಲತ್

Share It

ಬೆಂಗಳೂರು: ಫೆಬ್ರವರಿ 20 ರಂದು ನಗರದ ಹಲವು ಪ್ರದೇಶಗಳಲ್ಲಿ ನೆಡೆಯಲಿದೆ ಜಲ ಮಂಡಳಿಯಿಂದ ನೀರಿನ ಅದಾಲತ್ ನಡೆಯಲಿದೆ.

ಜಲಮಂಡಳಿಯ ವಿವಿಧ ಉಪ ವಿಭಾಗಗಳಾದ ವಾಯುವ್ಯ-2, ವಾಯುವ್ಯ-4, ಕೇಂದ್ರ 1-2, ಈಶಾನ್ಯ – 2, ಉತ್ತರ 1-2, ಉತ್ತರ 2-2, ದಕ್ಷಿಣ 1-2, ದಕ್ಷಿಣ 2–2, ನೈರುತ್ಯ -2, ನೈರುತ್ಯ -5, ಪೂರ್ವ 1-3 ಮತ್ತು ಪೂರ್ವ 2-3, ಉಪವಿಭಾಗಗಳಲ್ಲಿ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದು ಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಫೆಬ್ರವರಿ 20 ರಂದು ಬೆಳಿಗ್ಗೆ 9.30 ರಿಂದ 11 ಗಂಟೆಯವರೆಗೆ ಅದಾಲತ್ ಇರಲಿದೆ.

ಹೆಚ್.ಎಂ.ಟಿ ಪೀಣ್ಯ, ದಾಸರಹಳ್ಳಿ, ಪೀಣ್ಯ, ಲಿಂಗಧೀರನಹಳ್ಳಿ, ಅಂದರಹಳ್ಳಿ ಸೇವಾಠಾಣೆಗಳ ದೂರವಾಣಿ ಸಂಖ್ಯೆ 28360030 ಆಗಿದ್ದು, ಹೆಗ್ಗನಹಳ್ಳಿ, ಕೊಟ್ಟಿಗೆಪಾಳ್ಯ, ಹೇರೋಹಳ್ಳಿ ಸೇವಾಠಾಣೆಗಳ ದೂರವಾಣಿ ಸಂಖ್ಯೆ 9964216530, ಫ್ರೇಜರ್ ಟೌನ್, ಮಚಲಿಬೆಟ್ಟ, ಪಿಳ್ಳಣ್ಣ ಗಾರ್ಡನ್ 1 ಮತ್ತು 2 ಸೇವಾಠಾಣೆಗಳ ದೂರವಾಣಿ ಸಂಖ್ಯೆ 9845444053, ಕೆಂಪೇಗೌಡ ಟವರ್, ಕುಮಾರ ಪಾರ್ಕ್, ಜಯಮಹಲ್, ಸಂಜಯನಗರ, ನ್ಯೂ ಬಿ.ಇ.ಎಲ್. ರಸ್ತೆ ಸೇವಾಠಾಣೆಗಳ ದೂರವಾಣಿ ಸಂಖ್ಯೆ 22945135, ಆರ್.ಟಿ.ನಗರ ಕಾವಲ್ ಬೈರಸಂದ್ರ, ಗಂಗಾನಗರ, ಆನಂದನಗರ, ಮನೋರಾಯನಪಾಳ್ಯ ಸೇವಾಠಾಣೆಗಳ ದೂರವಾಣಿ ಸಂಖ್ಯೆ 22945139, ಸಿಂಗಾಪುರ, ವಿದ್ಯಾರಣ್ಯಪುರ, ಸಹಕಾರನಗರ, ಹೆಚ್.ಎಸ್.ಆರ್-1, ಕೋಡಿಚಿಕ್ಕನಹಳ್ಳಿ, ಬೊಮ್ಮನಹಳ್ಳಿ ಸೇವಾಠಾಣೆಗಳ ದೂರವಾಣಿ ಸಂಖ್ಯೆ 40977432, ಕೂಡ್ಲು, ಬೇಗೂರು ಸೇವಾಠಾಣೆಗಳ ದೂರವಾಣಿ ಸಂಖ್ಯೆ 9845444090, ವಿ.ವಿ.ಪುರಂ, ಸುಧಾಮನಗರ-2, ಕೆಂಪೇಗೌಡ ನಗರ, ಜಗಜೀವನರಾಮ್ ನಗರ, ಚಾಮರಾಜಪೇಟೆ ಸೇವಾಠಾಣೆಗಳ ದೂರವಾಣಿ ಸಂಖ್ಯೆ 984544085, ಬನಗಿರಿನಗರ, ಬಿ.ಎಸ್.ಕೆ-1 ಮತ್ತು 2, ಕುಮಾರಸ್ವಾಮಿ ಲೇಔಟ್, ಇಸ್ರೋ ಲೇಔಟ್, ಪೂರ್ಣ ಪ್ರಜ್ಞಾ ಲೇಔಟ್ ಸೇವಾಠಾಣೆಗಳ ದೂರವಾಣಿ ಸಂಖ್ಯೆ 22945198, ಪೂರ್ವ ವಿಲೇಜ್-2-1 ಮತ್ತು 2-2, ಕಾಡುಗೋಡಿ, ವರ್ತೂರು ಸೇವಾಠಾಣೆಗಳ ದೂರವಾಣಿ ಸಂಖ್ಯೆ 9535544974 ಆಗಿದೆ.

ಇದರ ಹೊರತಾಗಿ ಸಾರ್ವಜನಿಕರು ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಮಂಡಳಿಯ 24/7 ದೂರು ನಿರ್ವಹಣಾ ಕೇಂದ್ರದ ಸಹಾಯವಾಣಿ 1916ಗೆ ಕರೆ ಮಾಡಿ ದೂರುಗಳನ್ನು ದಾಖಲಿಸಬಹುದಾಗಿದೆ. ವಾಟ್ಸ್ಆದಫ್ ಸಂಖ್ಯೆ 8762228888 ಸಂದೇಶದ ಮೂಲಕ ಕೂಡ ದೂರನ್ನು ಸಲ್ಲಿಸಬಹುದಾಗಿದೆ.


Share It

You cannot copy content of this page