Education News

ಮುಂದಿನ ಶೈಕ್ಷಣಿಕ ವರ್ಷದಿಂದ ಎರಡು ಬೋರ್ಡ್ ಪರೀಕ್ಷೆ ನೆಡೆಸಲು ಮುಂದಾದ ಸಿ.ಬಿ.ಎಸ್.ಸಿ

Share It

ನವದೆಹಲಿ: ಮುಂದಿನ ಶೈಕ್ಷಣಿಕ ವರ್ಷದಿಂದ ಎರಡು ಬೋರ್ಡ್ ಪರೀಕ್ಷೆಗಳನ್ನು ನಡೆಸುವ ವಿಚಾರವಾಗಿ ಕೇಂದ್ರ ಶಿಕ್ಷಣ ಸಚಿವಾಲಯ ಇತ್ತೀಚೆಗೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿ.ಬಿ.ಎಸ್.ಸಿ) ಜೊತೆ ಚರ್ಚೆ ನೆಡೆಸಲು ಮುಂದಾಗಿದೆ.

ಸಭೆಯ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡ ಇತ್ತೀಚೆಗೆ ಮಾತನಾಡಿ, ಯೋಜನೆಯನ್ನು ಶೀಘ್ರದಲ್ಲೇ ಸಾರ್ವಜನಿಕ ಸಮಾಲೋಚನೆಗಾಗಿ ಕೂಡ ಇಡಲಾಗುವುದು. ವಿದ್ಯಾರ್ಥಿಗಳಿಗೆ ಒತ್ತಡ ಮುಕ್ತ ಕಲಿಕಾ ವಾತಾವರಣವನ್ನು ಸೃಷ್ಟಿಸಲು ಎರಡು ಬೋರ್ಡ್ ಪರೀಕ್ಷೆಗಳನ್ನು ನಡೆಸುವ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

2026-27ನೇ ಶೈಕ್ಷಣಿಕ ವರ್ಷಕ್ಕೆ ಶಾಲೆಗಳಿಗಾಗಿ ಜಾಗತಿಕ ಪಠ್ಯಕ್ರಮವನ್ನು ಪ್ರಾರಂಭಿಸಲಾಗುವುದು. ಈ ಕುರಿತು ಸಚಿವ ಧರ್ಮೇಂದ್ರ ಪ್ರಧಾನ್ ಅವರ ಅಧ್ಯಕ್ಷತೆಯಲ್ಲಿ ಸಭೆ ಕೂಡ ನೆಡೆದಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿದೇಶಿ ಶಾಲೆಗಳಿಗಾಗಿ ಸಿ.ಬಿ.ಎಸ್.ಸಿ ಜಾಗತಿಕ ಪಠ್ಯಕ್ರಮವನ್ನು ರಚಿಸಲಿದೆ ಮತ್ತು ಅದಕ್ಕೆ ಅನುಗುಣವಾಗಿ ವಿವರವಾದ ಕ್ರಿಯಾ ಯೋಜನೆ ಕೂಡ ಸಿದ್ಧವಾಗಲಿದೆ.

ಸದ್ಯ 10 ಮತ್ತು 12 ನೇ ತರಗತಿಗಳ ಬೋರ್ಡ್ ಪರೀಕ್ಷೆಗಳನ್ನು ಫೆಬ್ರವರಿ-ಮಾರ್ಚ್‌ನಲ್ಲಿ ನಡೆಸಲಾಗುತ್ತಿದೆ. ಮಂಡಳಿಯು ಸದ್ಯ ಸೆಮಿಸ್ಟರ್ ವ್ಯವಸ್ಥೆಯಲ್ಲಿ ಪರೀಕ್ಷೆಗಳನ್ನು ನಡೆಸುವುದು, ಮೊದಲ ಬೋರ್ಡ್ ಪರೀಕ್ಷೆಯನ್ನು ಜನವರಿ-ಫೆಬ್ರವರಿಯಲ್ಲಿ ಕೈಗೊಳ್ಳುವುದು ಮತ್ತು ಮಾರ್ಚ್- ಏಪ್ರಿಲ್‌ ಅಥವಾ ಜೂನ್‌ನಲ್ಲಿ ಎರಡನೇ ಸುಧಾರಣಾ ಪರೀಕ್ಷೆಯನ್ನು ನೆಡೆಸುವುದಾಗಿದೆ.


Share It

You cannot copy content of this page