News

ಆಸ್ತಿ ಮಾಲೀಕರ ಗಮನಕ್ಕೆ; ಇದುವರೆಗೂ ಇ ಖಾತಾ ಮಾಡಿಸದವರಿಗೆ ಕೊನೆಯ ಅವಕಾಶ ನೀಡಲು ಸಜ್ಜಾಗಿದೆ ಪಾಲಿಕೆ

Share It

ಬೆಂಗಳೂರು: ಇದುವರೆಗೂ ಇ ಖಾತಾ ಮಾಡಿಸದ ಆಸ್ತಿ ಮಾಲೀಕರಿಗೆ ಕೊನೆಯ ಅವಕಾಶ ನೀಡಲು ಪಾಲಿಕೆ ಮುಂದಾಗಿದೆ.

ಬೆಂಗಳೂರಿನ ಆಸ್ತಿ ಮಾಲೀಕರು ಇ-ಖಾತಾ ಮಾಡಿಸುವುದು ಕಡ್ಡಾಯ ಎಂದು ಪಾಲಿಕೆ ಆದೇಶ ಹೊರಡಿಸಿತ್ತು. ಈ ನಿಟ್ಟಿಿನಲ್ಲಿ ಬಿಬಿಎಂಪಿಯ ಕಚೇರಿಗಳು, ಬೆಂಗಳೂರು ಒನ್ ಕೇಂದ್ರಗಳಲ್ಲಿ ಇ ಖಾತಾ ಮಾಡಿಸಲು ಅವಕಾಶ ನೀಡಲಾಗಿತ್ತು. ಎಷ್ಟೇ ಬಾರಿ ಅವಕಾಶ ನೀಡಿದರೂ ಆಸ್ತಿಗಳಿಗೆ ಇ ಖಾತಾ ಮಾಡಿಸದ ಮಾಲೀಕರಿಗೆ ಕೊನೆಯ ಅವಕಾಶ ನೀಡಲು ಬಿಬಿಎಂಪಿ ಮುಂದಾಗಿದ್ದು, ಎಂಟು ವಲಯಗಳಲ್ಲಿ 45 ದಿನಗಳ ವಿಶೇಷ ಅಭಿಯಾನ ನಡೆಸಲು ಸಜ್ಜಾಗಿದೆ.

ಸದ್ಯ ಪಾಲಿಕೆ ಎಲ್ಲಾ ಆಸ್ತಿಿಗಳಿಗೂ ಇ ಖಾತಾ ನೀಡಲು ತಯಾರಿ ನಡೆಸಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಬರೋಬ್ಬರಿ 1 ಲಕ್ಷ ಖಾತಾ ಮಾಡಿಸುವ ಗುರಿ ಇಟ್ಟುಕೊಂಡಿರುವ ಬಿಬಿಎಂಪಿ, ಸ್ಪೆೆಷಲ್ ಡ್ರೈವ್ ಬಳಿಕ ತನ್ನ ಆದಾಯ ಕೊನೆಯ ಅವಕಾಶದ ಪ್ಲಾನ್ ರೂಪಿಸಿದೆ. ಈ ಮೂಲಕ ಪಾಲಿಕೆ ವ್ಯಾಪ್ತಿಯ ಎಲ್ಲ ಆಸ್ತಿಗಳಿಗೆ ಇ ಖಾತಾ ಮಾಡಿಸಿ ಬಳಿಕ ಆಯಾ ಆಸ್ತಿಗಳ ಮಾಲೀಕರ ಬಳಿ ಆಸ್ತಿ ತೆರಿಗೆ ವಸೂಲಿ ಮಾಡಲು ಬಿಬಿಎಂಪಿ ಸಜ್ಜಾಗಿದೆ. ಆಸ್ತಿ ತೆರಿಗೆ ಪಾವತಿಸಿದರಷ್ಟೇ ಖಾತಾ ಡೌನ್ ಲೋಡ್‌ಗೆ ಅವಕಾಶ ನೀಡುವ ವ್ಯವಸ್ಥೆೆ ಜಾರಿಗೊಳಿಸಲು ಚಿಂತನೆ ನಡೆಸಿದೆ. ಸದ್ಯ 1 ಲಕ್ಷ ಖಾತಾ ಮಾಡಿಸುವ ಗುರಿ ಹೊಂದಿರುವ ಪಾಲಿಕೆ, ಇದರಿಂದ ಬರೋಬ್ಬರಿ 100 ಕೋಟಿ ರೂಪಾಯಿ ಆದಾಯದ ನಿರೀಕ್ಷೆ ಇಟ್ಟುಕೊಂಡಿದೆ.


Share It

You cannot copy content of this page