News

ಪಿಇಎಸ್ ಸಂಸ್ಥೆಯ ಸ್ಥಾಪಕ, ವಿಧಾನಪರಿಷತ್ ಮಾಜಿ ಸದಸ್ಯ ದೊರೆಸ್ವಾಮಿ ವಿಧಿವಶ

Share It

ಬೆಂಗಳೂರು: ಪಿಇಎಸ್ ಶಿಕ್ಷಣ ಸಂಸ್ಥೆಗಳ ಸ್ಥಾಪಕ, ವಿಧಾನಪರಿಷತ್ ಮಾಜಿ ಸದಸ್ಯ ಎಂ.ಆರ್ ದೊರೆಸ್ವಾಮಿ ಗುರುವಾರ (ಮಾರ್ಚ 6)ರಂದು ಸಂಜೆ ವಿಧಿವಶರಾಗಿದ್ದಾರೆ.

ನಾಳೆ ಮಾರ್ಚ್ 7 ರಂದು ಅಂತ್ಯಕ್ರಿಯೆ ನಡೆಯಲಿದೆ. ವಯೋಸಹಜ ಕಾಯಿಲೆಗಳಿಂದ ಬಳಲಿದ್ದ ಎಂ ಆರ್ ದೊರೆಸ್ವಾಮಿ ಅವರಿಗೆ 88 ವರ್ಷ ವಯಸ್ಸಾಗಿತ್ತು. ದೊರೆಸ್ವಾಮಿ ಅವರು ಪತ್ನಿ ರಾಧಾ ಮನೋಹರಿ, ಹಾಗೂ ಒಬ್ಬ ಮಗ, ಮಗಳನ್ನು ಅಗಲಿದ್ದಾರೆ.

ಆಂಧ್ರ ಪ್ರದೇಶದ ಚಿತ್ತೂರು ಮೂಲದ ದೊರೆಸ್ವಾಮಿ ಅವರು ಎಂಎ, ಬಿಎಲ್ ವ್ಯಾಸಂಗ ಮಾಡಿದ್ದು, ಬೆಂಗಳೂರಿನಲ್ಲಿ ಶಿಕ್ಷಣ ತಜ್ಞರಾಗಿ, ಪಿಇಎಸ್ ಶಿಕ್ಷಣ ಸಂಸ್ಥೆೆಗಳನ್ನು ಸ್ಥಾಪಿಸಿ ಕರ್ನಾಟಕದ ಶಿಕ್ಷಣ ಕ್ಷೇತ್ರಕ್ಕೆೆ ಕೊಡುಗೆ ನೀಡಿದ್ದಾರೆ.


Share It

You cannot copy content of this page