Education News

ಇಂದು ನಡೆದ ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ 8 ಸಾವಿರ ವಿದ್ಯಾರ್ಥಿಗಳು ಗೈರು

Share It

ಬೆಂಗಳೂರು: ಸೋಮವಾರ ನಡೆದ ದ್ವಿತೀಯ ಪಿಯುಸಿ ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂ-ವಿಜ್ಞಾನ ಮತ್ತು ಗೃಹ ವಿಜ್ಞಾನದ ಪರೀಕ್ಷೆಗಳಿಗೆ 8,084 ವಿದ್ಯಾರ್ಥಿಗಳು ಗೈರಾಗಿದ್ದಾರೆ.

ಈ ಪರೀಕ್ಷೆಗಳಿಗೆ ಒಟ್ಟು 2,26,946 ಜನ ವಿದ್ಯಾರ್ಥಿಗಳು ನೋಂದಣಿಯಾಗಿದ್ದರು. ಇವರಲ್ಲಿ 2,18,862 ವಿದ್ಯಾರ್ಥಿಗಳು (ಶೇ.96.44) ಪರೀಕ್ಷೆಗೆ ಹಾಜರಾಗಿದ್ದಾರೆ.

ಬೆಂಗಳೂರು ಉತ್ತರದಲ್ಲಿ ಗರಿಷ್ಠ 1,630 ವಿದ್ಯಾರ್ಥಿಗಳು ಗೈರಾಗಿದ್ದು, ಬೆಂಗಳೂರು ದಕ್ಷಿಣ 929, ಬಳ್ಳಾರಿ 381, ಮೈಸೂರು 379 ಮತ್ತು ತುಮಕೂರು 348 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕನಿಷ್ಠ 39 ಜನ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಒಟ್ಟಾರೆ ಶೇ.96.44 ಹಾಜರಾತಿ ದಾಖಲಾಗಿದೆ.


Share It

You cannot copy content of this page