News

ಬಿಬಿಎಂಪಿ ವ್ಯಾಪ್ತಿಯ 25 ಲಕ್ಷ ಕರಡು ಇ-ಖಾತೆಗಳು ಆನ್‌ಲೈನ್‌ನಲ್ಲಿ ಲಭ್ಯ

Share It

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂದಾಜು 25 ಲಕ್ಷ ಕರಡು ಇ-ಖಾತೆಗಳು ಆನ್‌ಲೈನ್‌ನಲ್ಲಿ ಲಭ್ಯವಿದ್ದು, 2.87 ಲಕ್ಷ ಅಂತಿಮ ಇ-ಖಾತೆಗಳಿಗೆ ಅರ್ಜಿ ಗಳು ಸಲ್ಲಿಕೆಯಾಗಿದೆ. ಅದರಲ್ಲಿ 2.71 ಲಕ್ಷ ಅಂತಿಮ ಇ-ಖಾತೆಗಳನ್ನು ಈಗಾಗಲೇ ನೀಡಲಾಗಿದೆ.

ನಾಗರಿಕರು ಅರ್ಜಿ ಸಲ್ಲಿಸಿದ 2 ದಿನಗಳಲ್ಲಿ ಸರಾಸರಿ ಅಂತಿಮ ಇ-ಖಾತೆಯನ್ನು ನೀಡಲಾಗುತ್ತದೆ. ಆದ್ದರಿಂದ ನಾಗರಿಕರು ತಕ್ಷಣ ಅರ್ಜಿ ಸಲ್ಲಿಸಲು ವಿನಂತಿಸಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ನಾಗರಿಕರಿಂದ ಬರುವ ಇ-ಖಾತಾ ಅರ್ಜಿಗಳ ದೈನಂದಿನ ವಿಲೇವಾರಿಯು, ದಿನನಿತ್ಯದ ಸ್ವೀಕೃತಿಗಿಂತ ಹೆಚ್ಚಾಗಿ ಮಾಡಲಾಗುತ್ತಿದೆ.

ಪ್ರತಿನಿತ್ಯ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಇ-ಖಾತಾ ಅರ್ಜಿಗಳ ವಿಲೆವಾರಿಗೆ ಸಂಬಂಧಿಸಿದಂತೆ 8 ವಲಯಗಳ ಎಲ್ಲ 64 ಸಹಾಯಕ ಕಂದಾಯ ಅಧಿಕಾರಿಗಳು ಪ್ರತಿನಿತ್ಯ ಬೆಳಗ್ಗೆ 9 ಗಂಟೆಯಿಂದ 9.30 ರವರೆಗೆ ವರ್ಚ್ಯುವಲ್ ಮೂಲಕ ಸಭೆ ನಡೆಸಿ, ಅರ್ಜಿಗಳ ವಿಲೇವಾರಿ ಕುರಿತು ಪರಿಶೀಲಿಸುತ್ತಿದ್ದಾರೆ. ಜತೆಗೆ ಅಗತ್ಯ ನಿರ್ದೇಶನಗಳನ್ನು ನೀಡುತ್ತಿದ್ದಾರೆ.

ಲಿಂಕ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಯಾಗುತ್ತಿದ್ದು, ಅರ್ಜಿ ಸಲ್ಲಿಸಿದ ಕೂಡಲೇ ಅಂತಿಮ ಇ-ಖಾತಾಗಾಗಿ ಪಾಲಿಕೆ ಕಚೇರಿಗಳಿಗೆ ನೀಡುವ ಅಗತ್ಯವಿಲ್ಲ. ಪಾಲಿಕೆ ಸಹಾಯಕ ಕಂದಾಯ ಅಧಿಕಾರಿ ಹಾಗೂ ಕೇಸ್ ವರ್ಕರ್‌ಗಳು, ನಾಗರಿಕರು ಇ-ಖಾತಾಗಾಗಿ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ, ಕೂಡಲೇ ಅಂತಿಮ ಇ-ಖಾತಾ ಸಿಗುವ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ಪಾಲಿಕೆ ಕಂದಾಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲ ಸಹಾಯಕ ಕಂದಾಯ ಅಧಿಕಾರಿ ಕಚೇರಿಗಳು ನಾಗರಿಕ ಇ-ಖಾತೆ ಅರ್ಜಿಗಳನ್ನು ವಿಲೇವಾರಿ ಮಾಡಲು ಸಮರ್ಥವಾಗಿವೆ. ಸರಾಸರಿ ಬಾಕಿ ಇರುವ ನಾಗರಿಕ ಅರ್ಜಿಗಳನ್ನು ಒಂದು ದಿನದಲ್ಲಿ ವಿಲೇವಾರಿ ಮಾಡಲಾಗುತ್ತದೆ. ಹಾಗಾಗಿ ಅರ್ಜಿ ಸಲ್ಲಿಸಿದ ನಂತರ ಶೀಘ್ರದಲ್ಲೇ ಇ-ಖಾತಾ ಪಡೆಯಬಹುದಾಗಿದೆ ಎಂದಿದ್ದಾರೆ.

ವಲಯವಾರು ಅಂತಿಮ ಇ-ಖಾತಾ ನೀಡಿರುವ ವಿವರ:

ಮಹದೇವಪುರ – 37,793
ದಕ್ಷಿಣ – 37,738
ಪಶ್ಚಿಮ – 27,020
ಬೊಮ್ಮನಹಳ್ಳಿ – 46,025
ದಾಸರಹಳ್ಳಿ – 16,818
ಪೂರ್ವ – 25,848
ಯಲಹಂಕ – 38,494
ರಾಜರಾಜೇಶ್ವರಿ ನಗರ – 42,191
ಒಟ್ಟು = 2,71,927 ಲಕ್ಷ ರೂ.


Share It

You cannot copy content of this page