ಬೆಂಗಳೂರು: ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ ಟಿ-20 ಕ್ರಿಕೆಟ್ ಏಳು ಪಂದ್ಯಗಳ ವೀಕ್ಷಿಸಲು ಬರುವವರಿಗೆ ‘ನಮ್ಮ ಮೆಟ್ರೋ’ ತಡರಾತ್ರಿಯವರೆಗೆ ರೈಲು ಸೇವೆಯ ಸಮಯವನ್ನು ವಿಸ್ತರಿಸಿದೆ.
ಐಪಿಎಲ್ ಪಂದ್ಯಾವಳಿ ನಡೆಯಲಿರುವ ಏಪ್ರಿಲ್ 2, 10, 18 ಹಾಗೂ 24 ಮತ್ತು ಮೇ 3, 13 ಹಾಗೂ 17 ರಂದು ನಾಲ್ಕು ಟರ್ಮಿನಲ್ ಗಳಾದ ವೈಟ್ ಫೀಲ್ಡ್ , ಚಲ್ಲಘಟ್ಟ, ರೇಷ್ಮೆ ಸಂಸ್ಥೆ ಮತ್ತು ಮಾದಾವರ ಮೆಟ್ರೋ ನಿಲ್ದಾಣಗಳಿಂದ ಕೊನೆಯ ಮೆಟ್ರೋ ರೈಲು ರಾತ್ರಿ 12.30 ಕ್ಕೆ ಹೊರಡಲಿದೆ.
ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಿಂದ ಎಲ್ಲ ನಾಲ್ಕು ದಿಕ್ಕುಗಳ ಕಡೆಗೆ ಕೊನೆಯ ರೈಲು ಬೆಳಗಿನ ಜಾವ 1.15ಕ್ಕೆ ಹೊರಡಲಿದೆ ಎಂದು ಬಿ.ಎಂ.ಆರ್.ಸಿ.ಎಲ್ ಮಾಹಿತಿ ನೀಡಿದೆ.