ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಆಸ್ತಿ ತೆರಿಗೆ ಪಾವತಿ ಪೋರ್ಟಲ್ ಇಂದಿನಿಂದ ತೆರಿಗೆ ಪಾವತಿದಾರರಿಗೆ ಸಂಪುರ್ಣವಾಗಿ ಲಭ್ಯವಾಗಿದೆ.
ಏಪ್ರಿಲ್ 1ರಿಂದ ತ್ಯಾಜ್ಯ ವಿಲೇವಾರಿ ತೆರಿಗೆ ಸಮೇತ ಆಸ್ತಿ ತೆರಿಗೆ ಸ್ವೀಕಾರಕ್ಕೆ ಪಾಲಿಕೆ ಮುಂದಾಗಿತ್ತು. ಇದಕ್ಕಾಗಿ ಪೋರ್ಟಲ್‌ನಲ್ಲಿ ಒಂದಷ್ಟು ಸಣ್ಣ ಪುಟ್ಟ ಮಾರ್ಪಾಟು ಅಗತ್ಯವಾದುದ್ದರಿಂದ ಆನ್‌ಲೈನ್ ತೆರಿಗೆ ಪಾವತಿ ಸ್ಥಗಿತಗೊಂಡಿತ್ತು. ಇದೀಗ ಪಾಲಿಕೆ ತೆರಿಗೆ ಪಾವತಿಯ ಪೋರ್ಟಲ್‌ನಲ್ಲಿ ಬದಲಾವಣೆ ಕಾರ್ಯ ಪೂರ್ಣಗೊಳಿಸಿದ್ದು, ಇವತ್ತು ಪಾವತಿಗೆ ಅವಕಾಶ ನೀಡಿದೆ.
ಬಿಬಿಎಂಪಿ ಕಟ್ಟಡಗಳ ವಿಸ್ತೀರ್ಣದ ಆಧಾರದಲ್ಲಿ ಕಸಕ್ಕೆ 10 ರಿಂದ 400 ರೂಪಾಯಿ ವರೆಗೆ ಸೆಸ್ ವಿಧಿಸಿ ಆದೇಶಿಸಿತ್ತು. ಈ ಹಣವನ್ನು ಆಸ್ತಿ ತೆರಿಗೆ ಜತೆಗೆ ಮಾಲೀಕರಿಂದ ವಸೂಲಿ ಮಾಡುವುದಾಗಿ ತಿಳಿಸಿತ್ತು. ಹೀಗಾಗಿ ಏ.1ರಿಂದ 5ರವರೆಗೆ ಆನ್‌ಲೈನ್ ತೆರಿಗೆ ಪಾವತಿ ವಿಧಾನ ಸ್ಥಗಿತಗೊಳಿಸಲಾಗಿತ್ತು.