ಬೆಂಗಳೂರು: ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್ ಜೂನ್ 20 ರವರೆಗೆ ವಿಶೇಷ ಆವೃತ್ತಿಯ ಚಿಲ್ಲರೆ ಸಾಲ ಅಭಿಯಾನ “ಪಿ.ಎನ್.ಬಿ ನಿರ್ಮಾಣ್- 2025” ಅನ್ನು ಘೋಷಿಸಿದೆ.
ಈ ಅಭಿಯಾನ ಎಲ್ಲ ಶಾಖೆಗಳಲ್ಲಿನ ಗ್ರಾಹಕರಿಗೆ ನೇರವಾಗಿ, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಪಿ.ಎನ್.ಬಿ ಒನ್ ಅಪ್ಲಿಕೇಶನ್ ಮತ್ತು ಅಧಿಕೃತ ವೆಬ್‌ಸೈಟ್ ನಲ್ಲಿ ಲಭ್ಯವಿರಲಿದೆ. ಈ ಉಪಕ್ರಮದ ಭಾಗವಾಗಿ ಗೃಹ ಮತ್ತು ಕಾರು ಸಾಲಗಳಿಗೆ ಶೂನ್ಯ ಸಂಸ್ಕರಣೆ ಶುಲ್ಕ ವಿಧಿಸಲಾಗಿದೆ. ದಸ್ತಾವೇಜು ಶುಲ್ಕ, ಗೃಹ ಸಾಲ ಸ್ವಾಧೀನ ಶುಲ್ಕ, ಕಾನೂನು ಮತ್ತು ಮೌಲ್ಯಮಾಪನ ಶುಲ್ಕಗಳನ್ನು ಕಡಿತಗೊಳಿಸಲಾಗಿದೆ.
ಈ ಕುರಿತು ಮಾತನಾಡಿರುವ ಪಿಎನ್‌ಬಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಶೋಕ್ ಚಂದ್ರ, ಮನೆ ಮತ್ತು ಕಾರು ಮಾಲೀಕತ್ವ ಪಡೆಯುವ ಪ್ರಯಾಣವನ್ನು ಸರಳಗೊಳಿಸಿ, ಸೂಕ್ತ ಹಣಕಾಸು ಪರಿಹಾರ ನೀಡಿ ಗ್ರಾಹಕರನ್ನು ಸಬಲಗೊಳಿಸಲು ನಾವು ಬದ್ಧರಾಗಿದ್ದೇವೆ. ಪಿಎನ್‌ಬಿ ನಿರ್ಮಾಣ್- 2025′ ರ ಮೂಲಕ ಗ್ರಾಹಕರಿಗೆ ಇನ್ನಷ್ಟು ಸರಳೀಕರಿಸಿ, ವೇಗವಾಗಿ ಸಾಲವನ್ನು ನೀಡುವ ಗುರಿ ಹೊಂದಿದ್ದೇವೆ. ಹಲವು ಪ್ರಯೋಜನಗಳ ಜೊತೆಗೆ ಅಭಿಯಾನ ಮನೆ, ಕಾರು, ಶಿಕ್ಷಣ ಸಾಲಗಳ ಮೇಲೆ 5 ಬೇಸಿಸ್ ಪಾಯಿಂಟ್ ಬಡ್ಡಿದರ ರಿಯಾಯಿತಿಯನ್ನು ಸಹ ಒಳಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.