Education News

ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸ್ನಾತಕ ಪದವಿ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ

Share It

ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಜ್ಞಾನಜ್ಯೋತಿ-ಸೆಂಟ್ರಲ್‍ ಕಾಲೇಜ್‍ ಕ್ಯಾಂಪಸ್ ಆವರಣದಲ್ಲಿ ವಿವಿಧ ಸ್ನಾತಕ ಪದವಿ ವ್ಯಾಸಂಗಕ್ಕಾಗಿ ಮತ್ತು ಮಲ್ಲೇಶ್ವರಂ 13ನೇ ಕ್ರಾಸ್‍ನಲ್ಲಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿನ ವಿಶ್ವವಿದ್ಯಾನಿಲಯದ ಮಹಿಳಾ ಮಹಾವಿದ್ಯಾಲಯದಲ್ಲಿ ವಿವಿಧ ಸ್ನಾತಕ ಕೋರ್ಸ್ ಗಳ ಪ್ರವೇಶಾತಿಗಾಗಿ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಜ್ಞಾನಜ್ಯೋತಿ-ಸೆಂಟ್ರಲ್ ಕಾಲೇಜ್ ಕ್ಯಾಂಪಸ್ ಆವರಣದಲ್ಲಿ ವಿಶೇಷ ಸ್ನಾತಕ ಪದವಿ ಕೋರ್ಸುಗಳಾದ ಬಿ.ಸಿ.ಎ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂಡ್ಮೇ ಮಷಿನ್ ಲರ್ನಿಂಗ್), ಬಿ.ಸಿ.ಎ (ಡೇಟಾ ಸೈನ್ಸ್), ಬಿ.ಎಸ್.ಸಿ (ಗಣಕ ವಿಜ್ಞಾನ, ಗಣಿತಶಾಸ್ತ್ರ, ಸಂಖ್ಯಾಶಾಸ್ತ್ರ), ಬಿ.ಎಸ್ಸಿ (ಫ್ಯಾಶನ್‍ ಅಂಡ್‍ ಅಪ್ಯಾರಲ್‍ಡಿಸೈನ್), ಬಿ.ಬಿ.ಎ (ಬಿಸನೆಸ್‍ ಅನಾಲಿಟಿಕ್ಸ್, ಇಂಡಸ್ಟ್ರಿ ಇಂಟಿಗ್ರೇಟೆಡ್ ಪ್ರೋಗ್ರಾಂಗಳು, ಬಿ.ಕಾಂ (ಫೈನಾನ್ಸ್ ಅಂಡ್ ಅಕೌಂಟಿಂಗ್), ಬಿ.ಕಾಂ (ಫೈನಾನ್ಸಿಯಲ್ ಟೆಕ್ನಾಲಜಿ) ಮತ್ತು ಬಿ.ಎ (ಆಂಗ್ಲ, ಫ್ರೆಂಚ್, ಇತಿಹಾಸ, ಅರ್ಥಶಾಸ್ತ್ರ, ಪತ್ರಿಕೋದ್ಯಮ) ಲಭ್ಯವಿವೆ.

ಮಲ್ಲೇಶ್ವರಂ 13ನೇ ಕ್ರಾಸ್ ವಿಶ್ವವಿದ್ಯಾನಿಲಯದ ಮಹಿಳಾ ಮಹಾವಿದ್ಯಾಲಯದಲ್ಲಿ ಬಿ.ಸಿ.ಎ (ಸಾಮಾನ್ಯ), ಬಿ.ಬಿ.ಎ(ಸಾಮಾನ್ಯ), ಮತ್ತು ಬಿ.ಕಾಂ (ಸಾಮಾನ್ಯ) ಹಾಗೂ ಬಿ.ಎಸ್.ಸಿ (ಗಣಕ ವಿಜ್ಞಾನ, ಗಣಿತಶಾಸ್ತ್ರ, ಸಂಖ್ಯಾಶಾಸ್ತ್ರ), ಬಿ.ಎ (ಆಂಗ್ಲ, ಫ್ರೆಂಚ್, ಇತಿಹಾಸ, ಅರ್ಥಶಾಸ್ತ್ರ, ಪತ್ರಿಕೋದ್ಯಮ) ಕೋರ್ಸ್ ಗಳಿಗೆ ಪ್ರವೇಶಾತಿ ಇರಲಿದೆ.

ಪ್ರವೇಶಾತಿ ಪ್ರಕ್ರಿಯೆ ಏಪ್ರಿಲ್ 21 ರಿಂದ ಪ್ರಾರಂಭವಾಗಿದ್ದು, ಆಸಕ್ತ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಜಾಲತಾಣ Bangalore University Portal ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ. ಆನ್‍ಲೈನ್ ನೋಂದಣಿ ಮತ್ತು ಅರ್ಜಿ ಸಲ್ಲಿಕೆಗಾಗಿ ಕರ್ನಾಟಕ ಸರ್ಕಾರದ ಯು.ಯು.ಸಿ.ಎಂ.ಎಸ್ ಪೋರ್ಟಲ್ UUCMS Portal ಗೆ ಭೇಟಿ ನೀಡಬೇಕಿದೆ.


Share It

You cannot copy content of this page