News

ಟಿಸಿಎಸ್ ವರ್ಲ್ಡ್ 10ಕೆ ರನ್ ಗಾಗಿ ಬೆಳಗಿನಜಾವದಿಂದಲೇ ಮೆಟ್ರೋ ಸಂಚಾರ ಆರಂಭ

Share It

ಬೆಂಗಳೂರು: ಟಿಸಿಎಸ್ ವರ್ಲ್ಡ್ 10ಕೆ ರನ್ ಹಿನ್ನೆಲೆಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುವವರ ಅನುಕೂಲಕ್ಕಾಗಿ ಬೆಳಗಿನ ಜಾವವೇ ನಮ್ಮ ಮೆಟ್ರೋ ಸಂಚಾರ ಆರಂಭವಾಗಲಿದೆ.

ಮೈರಥಾನ್ ಸಾರ್ವಜನಿಕರಿಗೆ ಭಾಗವಹಿಸಲು ಅನುಕೂಲವಾಗುವಂತೆ, ನಮ್ಮ ಮೆಟ್ರೋ ಏ.27ರ ಭಾನುವಾರ ಬೆಳಗ್ಗೆ 3:30ಕ್ಕೆ ರೈಲು ಸೇವೆ ಪ್ರಾರಂಭವಾಗಲಿದೆ. ಇದರಿಂದ ಸಾಮಾನ್ಯ ಸಮಯಕ್ಕಿಂತ ಮೂರುವರೆ ಗಂಟೆಗಳ ಮುಂಚೆಯೇ ಪ್ರಾರಂಭವಾದಂತಾಗುತ್ತದೆ.

ಈ ವಿಸ್ತೃತ ಅವಧಿಯಲ್ಲಿ ನಾಲ್ಕೂ ಮೆಟ್ರೋ ಟರ್ಮಿನಲ್‌ಗಳು ಮತ್ತು ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ ನಿಂದ ರೈಲುಗಳು 12 ನಿಮಿಷಗಳ ಆವರ್ತನದಲ್ಲಿ ಚಲಿಸಲಿದೆ. ಆದ್ದರಿಂದ ವರ್ಲ್ಡ್ ಪ್ರೀಮಿಯರ್ 10ಕೆ ಓಟದಲ್ಲಿ ಭಾಗವಹಿಸಲು ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ನಮ್ಮ ಮೆಟ್ರೋ ಮನವಿ ಮಾಡಿದೆ.


Share It

You cannot copy content of this page