News

ಪ್ರವಾಸೋದ್ಯಮ ಅತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿ ಆಹ್ವಾನ

Share It

ಬೆಂಗಳೂರು: ಪ್ರವಾಸೋದ್ಯಮ ಇಲಾಖೆ ವತಿಯಿಂದ 2025-26 ನೇ ಸಾಲಿನಲ್ಲಿ ಎಸ್.ಸಿ.ಎಸ್.ಟಿ/ಟಿ.ಎಸ್.ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಪ್ರವಾಸೋದ್ಯಮ ಅತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಹಾರ ಮತ್ತು ಪಾನೀಯ ಸೇವಾ ಮೇಲ್ವಿಚಾರಕ ತರಬೇತಿ, ಮಲ್ಟಿ ಕ್ಯುಸಿನ್ ಕುಕ್, ಫ್ರಂಟ್ ಆಫೀಸ್ ಅಸೋಸಿಯೇಟ್ ತರಬೇತಿ, ಕೊಠಡಿ ಪರಿಚಾರಕ ಸೇರಿದಂತೆ ಇನ್ನಿತರ ತರಬೇತಿ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.

ಆಸಕ್ತ ಅಭ್ಯರ್ಥಿಗಳು ಉಪನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ನಂ.54, 5ನೇ ಮಹಡಿ, ಇಂಧನ ಭವನ, ರೇಸ್ ಕೋರ್ಸ್ ರಸ್ತೆ, ರಿನೇಸನ್ಸ್ ಹೋಟೆಲ್ ಎದುರು, ಬೆಂಗಳೂರು 560009 ಇಲ್ಲಿ ಅರ್ಜಿಗಳನ್ನು ಪಡೆದು 2025ರ ಮೇ 26 ರೊಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಯಾದ 8151984548 ಗೆ ಸಂಪರ್ಕಿಸಬಹುದಾಗಿದೆ.


Share It

You cannot copy content of this page