ನವದೆಹಲಿ/ಬೆಂಗಳೂರು: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 10ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟಿಸಿದ್ದು, ಶೇ 93.66 ರಷ್ಟುವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
24,867 ವಿದ್ಯಾರ್ಥಿಗಳು 95% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದು, 1,11,544 ವಿದ್ಯಾರ್ಥಿಗಳು 90% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಒಟ್ಟು 23,85,079 ವಿದ್ಯಾರ್ಥಿಗಳಲ್ಲಿ 22,21,636 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ತಿರುವನಂತಪುರ ಶೇ 99.79 ರಷ್ಟು ಫಲಿತಾಂಶ ಪಡೆದು ಮೊದಲ ಸ್ಥಾನ ಗಳಿಸಿದ್ದರೆ, ವಿಜಯವಾಡ ಶೇ 99.79 ರಷ್ಟು ಫಲಿತಾಂಶ ಪಡೆದು ಎರಡನೇ ಸ್ಥಾನದಲ್ಲಿದೆ. ಶೇ 98.90 ರಷ್ಟು ಫಲಿತಾಂಶ ಪಡೆದು ಬೆಂಗಳೂರು ಮೂರನೇ ಸ್ಥಾನ ಗಳಿಸಿದೆ. ಉಳಿದಂತೆ ಚೆನ್ನೈ, ಪುಣೆ, ಅಜ್ಮೀರ್ ನಂತರದ ಸ್ಥಾನದಲ್ಲಿವೆ. ದೆಹಲಿ 7 ನೇ ಸ್ಥಾನದಲ್ಲಿದ್ದರೆ, ಗುವಾಹಟಿ ಕೊನೆಯ ಸ್ಥಾನದಲ್ಲಿದೆ.
ಜವಾಹರ್ ನವೋದಯ ವಿದ್ಯಾಲಯಗಳು ಶಾಲೆಗಳು 99.49% ರಷ್ಟು ಫಲಿತಾಂಶ ದಾಖಲಿಸಿ ಅಗ್ರಸ್ಥಾನ ಪಡೆದಿದ್ದರೆ. ಕೇಂದ್ರೀಯ ವಿದ್ಯಾಲಯಗಳು 99.45% ರಷ್ಟು, 94.17% ರಷ್ಟು ಫಲಿತಾಂಶವನ್ನು ದಾಖಲಿಸಿವೆ. ಉಳಿದಂತೆ ಟಿಬೆಟಿಯನ್ ಶಾಲೆಗಳು 91.53% ರಷ್ಟು ಉತ್ತೀರ್ಣತೆಯನ್ನು ದಾಖಲಿಸಿದ್ದರೆ, ಸರ್ಕಾರಿ ಶಾಲೆಗಳು 89.26% ರಷ್ಟು ಮತ್ತು ಸರ್ಕಾರಿ ಅನುದಾನಿತ ಶಾಲೆಗಳು 83.94% ರಷ್ಟು ಫಲಿತಾಂಶವನ್ನು ದಾಖಲಿಸಿವೆ.
ಫೆಬ್ರವರಿ-ಮಾರ್ಚ್ ತಿಂಗಳಿನಲ್ಲಿ ನಡೆದಿದ್ದ ಪರೀಕ್ಷೆ:
ಬೋರ್ಡ್ ಪರೀಕ್ಷೆಗಳು ಫೆ. 15 ರಿಂದ ಮಾ.18 ರವರೆಗೆ ನಡೆದಿದ್ದು, ಈ ವರ್ಷ 24.12 ಲಕ್ಷ ವಿದ್ಯಾರ್ಥಿಗಳು 84 ವಿಷಯಗಳಲ್ಲಿ ಪರೀಕ್ಷೆ ಬರೆದಿದ್ದರು. ಈ ವರ್ಷ ಸುಮಾರು 26,675 ಶಾಲೆಗಳು ಹೆಸರು ನೋಂದಾಯಿಸಿದ್ದವು, 7,837 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.