ಬೆಂಗಳೂರು: ಕರ್ನಾಟಕ ವಿಡಿಯೊ ಮತ್ತು ಪೋಟೋ ಅಸೋಸಿಯೇಷನ್, ಬೈಸೇಲ್ ಇನ್ಟ್ರಾಕ್ಟನ್ಸ್ ಪ್ರವೈಟ್ ಲಿಮಿಟೆಡ್ ಹಾಗೂ ಕರ್ನಾಟಕ ರಾಜ್ಯ ಪತ್ರಿಕಾ ಛಾಯಗ್ರಾಹಕರ ಸಂಘದ ಸಹಯೋಗದಲ್ಲಿ ಜೂನ್ 27ರಿಂದ 29ರವರಗೆ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಪೋಟೋ ಟುಡೇ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಕರ್ನಾಟಕ ವಿಡಿಯೊ ಮತ್ತು ಪೋಟೋ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಕೃಷ್ಣಪ್ಪ ಮಾಹಿತಿ ನೀಡಿದರು.
ಬುಧವಾರ ಮಧ್ಯಾಹ್ನ 12 ಗಂಟೆಗೆ ಪ್ರೆಸ್ ಕ್ಲಬ್ ನಲ್ಲಿ ನೆಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 25ವರ್ಷದ ಸಂಭ್ರಮಾಚರಣೆ ಅಚರಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಕಣ್ಣಿನ ತಪಾಸಣೆ ನೆಡೆಯಲಿದೆ. ವಿಡಿಯೊ ಕ್ಯಾಮರ, ಸ್ಟಿಲ್ ಕ್ಯಾಮರಗಳ ಕುರಿತು ಮಾಹಿತಿ ಮತ್ತು ಕ್ಯಾಮರಗಳ ಸಮಗ್ರ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು.
ವಸ್ತು ಪ್ರದರ್ಶನದಲ್ಲಿ ಕ್ಯಾಮರಗಳ ಮಹತ್ವ ಮತ್ತು ಅದನ್ನ ಬಳಕೆ ಮಾಡುವ ಕುರಿತು ಕ್ಯಾಮರ ಹೊಸ ತಂತ್ರಜ್ಞಾನದ ಕುರಿತು ಮಾಹಿತಿ ನೀಡಲಾಗುವುದು. 250ಕ್ಕೂ ಮಳಿಗೆಗಳು ಇರುತ್ತದೆ. ಸಾರ್ವಜನಿಕರು ಮತ್ತು ವಿಡಿಯೊ ಮತ್ತು ಕ್ಯಾಮರ ಬಳಕೆದಾರರು ಮತ್ತು ವಿಡಿಯೊ, ಕ್ಯಾಮರದಲ್ಲಿ ಉದ್ಯಮದಲ್ಲಿ ಇರುವ ಮತ್ತು ವಿಡಿಯೊಗ್ರಾಫರ್, ಪೋಟೋಗ್ರಾಫರ್ ಗಳು ಇದರ ಅವಕಾಶ ಪಡೆಯಬಹುದು ಎಂದರು.
ಸಚಿವ ಸಂತೋಷ್ ಲಾಡ್, ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷರು ಹಾಗು ಶಾಸಕರಾದ ಅಬ್ಬಯ್ಯಪ್ರಸಾದ್ ಉದ್ಘಾಟನೆ ಕಾರ್ಯಕ್ರಮ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪತ್ರಿಕಾ ಛಾಯಗ್ರಾಹಕರು, ಛಾಯಗ್ರಾಹಕರು ಮತ್ತು ಮಹಿಳಾ ಛಾಯಗ್ರಾಹಕರು ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕಪೋಟ್ ಆಂಡ್ ವಿಡಿಯೊ ಅಸೋಸಿಯೇಷನ್ ಅಧ್ಯಕ್ಷ ಬೆಂಜಮಿನ್, ಕಾರ್ಯದರ್ಶಿ ಜಗದೀಶ್, ಕರ್ನಾಟಕ ಪತ್ರಿಕಾ ಛಾಯಗ್ರಾಹಕರ ಸಂಘದ ಅಧ್ಯಕ್ಷ ವಿಶ್ವೇಶ್ವರಪ್ಪ ಉಪಸ್ಥಿತರಿದ್ದರು.