Education News

ಡಿಸಿಇಟಿ 2ನೇ ಸುತ್ತಿನ ಸೀಟು ಹಂಚಿಕೆ ಆರಂಭಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ

Share It

ಬೆಂಗಳೂರು: 3ನೇ ಸೆಮಿಸ್ಟರ್‌ ಅಥವಾ 2ನೇ ವರ್ಷದ ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ನೇರ ಪ್ರವೇಶ ಕಲ್ಪಿಸುವ ಡಿಸಿಇಟಿ-25 ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಗುರುವಾರದಿಂದ ಆರಂಭವಾಗಿದ್ದು, ಕಾಲೇಜಿಗೆ ವರದಿ ಮಾಡಿಕೊಳ್ಳಲು ಜುಲೈ 30 ಕೊನೆ ದಿನವಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌.ಪ್ರಸನ್ನ ತಿಳಿಸಿದ್ದಾರೆ.

ಅಭ್ಯರ್ಥಿಗಳು ತಮ್ಮ ಇಚ್ಛೆ/ಆಯ್ಕೆಗಳನ್ನು ಅವಶ್ಯವಿದ್ದಲ್ಲಿ ಬದಲಿಸಿಕೊಳ್ಳಲು ಹಾಗೂ ತೆಗೆದು ಹಾಕಲು ಜುಲೈ 26ರ ಬೆಳಿಗ್ಗೆ 11ಗಂಟೆವರೆಗೆ ಅವಕಾಶ ನೀಡಲಾಗಿದೆ. ಜುಲೈ 26ರ ಸಂಜೆ 8ಕ್ಕೆ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಪ್ರಕಟಿಸಲಾಗುತ್ತದೆ. ಶುಲ್ಕ ಪಾವತಿ ಮತ್ತು ಸೀಟು ಖಾತರಿ ಚೀಟಿ ಡೌನ್‌ಲೋಡ್‌ ಮಾಡಿಕೊಳ್ಳಲು ಜು.28ರ ಮಧ್ಯಾಹ್ನ 1ರಿಂದ ಜುಲೈ 30ರ ಸಂಜೆ 4ಗಂಟೆವರೆಗೆ ಅವಕಾಶ ನೀಡಲಾಗಿದೆ. ಜುಲೈ 30ರಂದು 6ಗಂಟೆಯೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು ಎಂದು ಮಾಹಿತಿ ನೀಡಿದ್ದಾರೆ.


Share It

You cannot copy content of this page