Education News

ವಿಜ್ಞಾನ ವಿಚಾರ ಮಂಥನಕ್ಕೆ ನಗರದಲ್ಲಿ ತಲೆಯೆತ್ತಿದೆ ವಿನೂತನ ಎಕ್ಸ್‌ಪೀರಿಯನ್ಸ್‌ ಸೆಂಟರ್‌

Share It

ಬೆಂಗಳೂರು: ಸೈನ್ಸ್‌ ಅಥವಾ ವಿಜ್ಞಾನ ಎನ್ನುವುದು ಕಬ್ಬಿಣದ ಕಡಲೆ ಅಲ್ಲ. ಅರ್ಥ ಮಾಡಿಕೊಳ್ಳಲಾಗದ ವಿಷಯವೂ ಅಲ್ಲ. ಅದೊಂದು ವಿನೋದ. ಇದನ್ನು ಉಣಬಡಿಸಲು ಜಯನಗರದ ಹೃದಯ ಭಾಗದಲ್ಲಿರುವ “ದಿ ಪರಮ್ ಸೈನ್ಸ್ ಎಕ್ಸ್‌ಪೀರಿಯನ್ಸ್‌ ಸೆಂಟರ್‌ ಬನ್ನಿ ಕಾರ್ಯಾರಂಭ ಮಾಡಿದೆ. ಈ ಕೇಂದ್ರದಲ್ಲಿ ಪ್ರಾಯೋಗಿಕ ಕಲಿಕೆಗೆ ಅವಕಾಶ ಇದ್ದು, ನಮ್ಮ ಜೀವನದಲ್ಲಿ ವಿಜ್ಞಾನ ಹೇಗೆ ಅಡಗಿದೆ ಎಂಬುದನ್ನು ಇಲ್ಲಿ ಅರಿಯಬಹುದಾಗಿದೆ. ಅಲ್ಲದೆ, ವಿಜ್ಞಾನದಲ್ಲಿ ತಂತ್ರಜ್ಞಾನದ ಬಳಕೆಯನ್ನೂ ಕಲಿಯಬಹುದಾಗಿದೆ.

ವಿಜ್ಞಾನ ನಮ್ಮ ದೈನಂದಿನ ಜೀವನದ ಭಾಗವಾಗಿದೆ. ಅದು ಎಷ್ಟು ಸರಳ ಎಂಬುದನ್ನು ಈ ಸೆಂಟರ್‌ನಲ್ಲಿ ತಿಳಿಯಬಹುದಾಗಿದೆ. ಇಂಥದ್ದೊಂದು ಪ್ರಾಯೋಗಿಕ ಗ್ಯಾಲರಿಯಾಗಿ ಬಹುಬೇಗ ಜನಪ್ರಿಯತೆ ಗಳಿಸುತ್ತಿದೆ. ಈ ಪರಮ್‌ ಸೈನ್ಸ್‌ ಎಕ್ಸ್‌ಪೀರಿಯನ್ಸ್ ಕೇಂದ್ರ ಕೇವಲ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಮಾತ್ರ ಸೀಮಿತವಾಗಿರದೆ ಮಕ್ಕಳ ಕಲಿಕಾ ಮಟ್ಟವನ್ನು, ಚಿಂತನಾ ಲಹರಿಯನ್ನು ಓರೆಗೆ ಹಚ್ಚುವ ಕೆಲಸ ಮಾಡುತ್ತಿದೆ. ವಿಜ್ಞಾನದ ಬಗೆಗಿನ ಪರಿಕಲ್ಪನೆಯನ್ನು ಬದಲಾಯಿಸಿ ಸ್ಮೃತಿಪಟಲದಲ್ಲಿ ಸುಲಭವಾಗಿ ಅಚ್ಚೊತ್ತಲಿದೆ.

ಹೇಗಿದೆ ಪಾರ್ಸೆಕ್ ವಿಜ್ಞಾನ ಲೋಕ?

ಈ ಸೆಂಟರ್‌ಗೆ ಕಾಲಿಟ್ಟರೆ ಸಾಕು ವಿಜ್ಞಾನ ಲೋಕವೇ ತೆರೆದುಕೊಳ್ಳಲಾರಂಭಿಸುತ್ತದೆ. ವಿಜ್ಞಾನದ ಕೌತುಕಗಳ ಬಗ್ಗೆ ನೀವು ಖುದ್ದು ಅನುಭವವನ್ನು ಇಲ್ಲಿ ಪಡೆದುಕೊಳ್ಳಬಹುದಾಗಿದೆ. ವಿಜ್ಞಾನದ ಜೊತೆ ಜೊತೆಗೆ ಸಾಗುತ್ತಿರುವ ಅನುಭವ ಸಿಗುತ್ತದೆ. ತಂತ್ರಜ್ಞಾನದಲ್ಲಿ ವಿಜ್ಞಾನದ ಬಳಕೆ ಹೇಗಿದೆ? ಇದಕ್ಕೂ ವಿಜ್ಞಾನಕ್ಕೂ ಏನು ಸಂಬಂಧ ಎಂಬುದನ್ನು ಸ್ವತಃ ತಿಳಿದುಕೊಳ್ಳಬಹುದಾಗಿದೆ. ಇಲ್ಲಿ ಒಟ್ಟು 7 ಗ್ಯಾಲರಿಯನ್ನು ರೂಪಿಸಲಾಗಿದೆ. ಇಂಟ್ರೊಡಕ್ಷನ್‌ ಗ್ಯಾಲರಿ, ಕೈನೆಟಿಕ್ ಗ್ಯಾಲರಿ, ಟ್ಯಾಕ್ಟೈಲ್‌ ಗ್ಯಾಲರಿ, ಡಿಜಿಟಲ್ ಗ್ಯಾಲರಿ, ಪಜಲ್ ಗ್ಯಾಲರಿ ಮತ್ತು ಲೈಟ್‌ ಗ್ಯಾಲರಿ, ಇಲ್ಯೂಷನ್ ಗ್ಯಾಲರಿ ಎಂಬುದಾಗಿ ಮಾಡಲಾಗಿದೆ.

100ಕ್ಕೂ ಹೆಚ್ಚು ಪ್ರಾತ್ಯಕ್ಷಿಕೆಗಳು:

ಒಟ್ಟಾರೆ ಈ ಏಳು ಗ್ಯಾಲರಿಗಳಿಂದ 100ಕ್ಕೂ ಹೆಚ್ಚು ಪ್ರಾತ್ಯಕ್ಷಿಕೆಗಳನ್ನು ಕಾಣಬಹುದಾಗಿದೆ. ಮನುಷ್ಯನಂತೆ ಹೆಜ್ಜೆ ಹಾಕುವ ಬೈಸಿಕಲ್‌ ಇರಬಹುದು, ಬೆರಳ ತುದಿಯಲ್ಲೇ ಆಡಿಸಬಹುದಾದ ತಂತ್ರಜ್ಞಾನಗಳನ್ನು ಅರಿಯಬಹುದು. ಇದೇ ರೀತಿಯಾಗಿ ವಿಭಿನ್ನವಾದ ಹಲವಾರು ಆಸಕ್ತಿದಾಯಕ, ತಿಳಿದುಕೊಳ್ಳಲೇಬೇಕಾದ ಅಂಶಗಳು ಇಲ್ಲಿವೆ.


Share It

You cannot copy content of this page