News

3.7 ಲಕ್ಷ ಆಸ್ತಿಗಳ ಬಾಕಿ ತೆರಿಗೆ ವಸೂಲಿಗೆ ಕಠಿಣ ಕ್ರಮ: ಇ-ಖಾತಾ ನಿರ್ಬಂಧಕ್ಕೆ ಸಿದ್ದತೆ

Share It

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ತನ್ನ ವ್ಯಾಪ್ತಿಯಲ್ಲಿ 3.7 ಲಕ್ಷ ಆಸ್ತಿಗಳ ಮಾಲಿಕರು ತೆರಿಗೆ ಪಾವತಿಸದೇ ಸುಸ್ತಿಯಾಗಿರುವುದನ್ನು ಗುರುತಿಸಿದೆ. ಈ ಆಸ್ತಿಗಳಿಂದ ಬಿಬಿಎಂಪಿಗೆ ಸುಮಾರು 700 ರಿಂದ 800 ಕೋಟಿ ರೂ ಆಸ್ತಿ ತೆರಿಗೆ ಬಾಕಿ ಬರಬೇಕಿದೆ.

ಈ ಹಿನ್ನೆಲೆಯಲ್ಲಿ ಬಾಕಿ ತೆರಿಗೆ ಪಾವತಿಸದವರಿಗೆ ಎಸ್‌ಎಂಎಸ್ ಮತ್ತು ಇಮೇಲ್ ಮೂಲಕ ನೋಟಿಸ್‌ಗಳನ್ನು ಮರು ಜಾರಿ ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ. ವಿಶೇಷ ಆಯುಕ್ತ (ಕಂದಾಯ) ಮುನೀಶ್ ಮೌದ್ಗಿಲ್ ಸುಮಾರು 6,000-7,000 ಆಸ್ತಿಗಳಿಗೆ ಹರಾಜು ನೋಟಿಸ್ ನೀಡಲಾಗಿದೆ. ಹೀಗಿದ್ದರೂ, ಮಾಲಿಕರು ಆಸ್ತಿ ತೆರಿಗೆ ಪಾವತಿಸುವಲ್ಲಿ ವಿಫಲವಾಗಿದ್ದಾರೆ ಎಂದು ಹೇಳಿದ್ದಾರೆ.

ಇದೀಗ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿರುವ ಬಿಬಿಎಂಪಿ, ಆಸ್ತಿ ತೆರಿಗೆ ಸುಸ್ತಿದಾರರ ಇ-ಖಾತಾ ಖಾತೆಗಳನ್ನು ಬ್ಲಾಕ್ ಮಾಡಲು ಯೋಚಿಸುತ್ತಿದೆ. ಇ ಖಾತಾಗಳು ಬ್ಲಾಕ್ ಆದಲ್ಲಿ ಬಾಕಿ ತೆರಿಗೆ ಪಾವತಿಸುವವರೆಗೆ ಆಸ್ತಿ ಮಾರಾಟವನ್ನು ತಡೆಗಟ್ಟಲಿದೆ. ಈ ಪ್ರಕ್ರಿಯೆಗೆ 4-5 ತಿಂಗಳಾಗಬಹುದು ಎಂದು ಬಿಬಿಎಂಪಿ ಆಯುಕ್ತರು ಹೇಳಿದ್ದಾರೆ.


Share It

You cannot copy content of this page