News

ಸಂಜೆ ನ್ಯಾಯಾಲಯಗಳ ಪ್ರಸ್ತಾವನೆಗೆ ವಕೀಲರ ಸಂಘದ ವಿರೋಧ

Share It

ಬೆಂಗಳೂರು: ರಾಜ್ಯದಲ್ಲಿ ಸಂಜೆ ನ್ಯಾಯಾಲಯಗಳನ್ನು ಸ್ಥಾಪಿಸುವ ಪ್ರಸ್ತಾಪಕ್ಕೆ ಬೆಂಗಳೂರು ವಕೀಲರ ಸಂಘ ಆಕ್ಷೇಪ ವ್ಯಕ್ತಪಡಿಸಿದ್ದು, ತಕ್ಷಣವೇ ಪ್ರಸ್ತಾವನೆ ಹಿಂಪಡೆಯುವಂತೆ ಒತ್ತಾಯಿಸಿದೆ.

ಈ ಕುರಿತಂತೆ ಎಎಬಿಯು ಬೆಂಗಳೂರು ಪ್ರಧಾನ ಜಿಲ್ಲಾ ನ್ಯಾಯಾಧೀಶ ಮುರಳೀಧರ ಪೈ ಅವರಿಗೆ ಪತ್ರ ಬರೆದಿದೆ. ಪತ್ರದಲ್ಲಿ ಸಂಜೆಯ ಸಮಯದಲ್ಲಿ ವಕೀಲರು ಕಕ್ಷಿದಾರರನ್ನು ಭೇಟಿಯಾಗಬೇಕಿರುತ್ತದೆ. ವಕೀಲರಿಗೆ ವೃತ್ತಿ ಜೀವನ ಮತ್ತು ಕೌಟುಂಬಿಕ ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳುವ ಅವಕಾಶ ಈಗಾಗಲೇ ಕಡಿಮೆಯಿದೆ. ಇಂಥಹ ಪರಿಸ್ಥಿತಿಯಲ್ಲಿ ವಕೀಲರು ಸಂಜೆ ನ್ಯಾಯಾಲಯಗಳಿಗೆ ಸಮಯ ನೀಡುತ್ತಾರೆ ಎಂದು ನಿರೀಕ್ಷಿಸುವುದು ಸಮಂಜಸವಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.

ನ್ಯಾಯಾಲಯದ ಕಾರ್ಯಕಲಾಪದ ನಂತರ ವಕೀಲರಿಗೆ ಅವರ ಕಚೇರಿ ಸಮಯವೂ ಮುಖ್ಯವಾಗಿದೆ. ಕಕ್ಷಿದಾರರನ್ನು ಭೇಟಿ ಮಾಡಬೇಕಾಗುತ್ತದೆ. ಪ್ರಕರಣಗಳಿಗೆ ತಯಾರಿ ನಡೆಸಬೇಕಿರುತ್ತದೆ. ಸಂಜೆ ನ್ಯಾಯಾಲಯಗಳು ಕಾರ್ಯರೂಪಕ್ಕೆ ಬಂದರೆ ವಕೀಲರ ಈ ಚಟುವಟಿಕೆಗಳಿಗೆ ತಡೆಯಾಗುತ್ತದೆ. ಈಗಾಗಲೇ ವಕೀಲರು ಸಾಕಷ್ಟು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸಂಜೆ ನ್ಯಾಯಾಲಯಗಳ ಪ್ರಸ್ತಾವನೆ ಸೂಕ್ತವಲ್ಲ ಎಂದು ಎಎಬಿ ಹೇಳಿದೆ.


Share It

You cannot copy content of this page