News

ವೀರಶೈವ ಲಿಂಗಾಯತ ಸಮಾಜದಲ್ಲಿ ಒಗ್ಗಟ್ಟಿಲ್ಲ: ಬಸವರಾಜ ಬೊಮ್ಮಾಯಿ

Share It

ಹುಬ್ಬಳ್ಳಿ: ವೀರಶೈವ ಲಿಂಗಾಯತ ಸಮಾಜದಲ್ಲಿ ಒಗ್ಗಟ್ಟಿಲ್ಲದ ಕಾರಣ ಜನಸಂಖ್ಯೆ ಕಡಿಮೆಯಾಗಿದ್ದು, ರಾಜಕೀಯ ಶಕ್ತಿ ಇದ್ದರೆ ಮಾತ್ರ ನಮಗೆ ಸಂಪೂರ್ಣ ನ್ಯಾಯ ಸಿಗಲು ಸಾಧ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ನಡೆದ ವೀರಶೈವ ಲಿಂಗಾಯತ ಏಕತಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂವಿಧಾನದಲ್ಲಿ ಆರು ಧರ್ಮಗಳು ಮಾತ್ರ ಅಂಗೀಕೃತವಾಗಿವೆ. ಆದ್ದರಿಂದ ಸಮೀಕ್ಷೆಯಲ್ಲಿ ಧರ್ಮದ ಕುರಿತು ಹೆಚ್ಚು ಗಮನ ನೀಡದೆ ಜಾತಿ ಕಾಲಂ ವೀರಶೈವ ಲಿಂಗಾಯತ ಎಂದು, ಉಪ ಪಂಗಡದಲ್ಲಿ ಮೀಸಲಾತಿಗೆ ಅನುಗುಣವಾಗಿ ಬರೆಸಬೇಕು. ದಿಂಗಾಲೇಶ್ವರ ಗುರುಗಳು ಒಂದು ಸಾಹಸ ಮಾಡುತ್ತಿದ್ದಾರೆ. ಒಂದು ಗಟ್ಟಿಯಾದ ಬೆಸುಗೆ ಹಾಕಿ ವೀರಶೈವ ಲಿಂಗಾಯತರು ಒಂದಾಗಿರಬೇಕು ಎಂದು ನಿಂತಿದ್ದಾರೆ. ಅದಕ್ಕೆ ವೀರಶೈವ ಮಹಾಸಭಾ ಹೆಗಲು ಕೊಟ್ಟು ನಿಂತಿದೆ ಇದು ಸಂತಸದ ವಿಚಾರ ಎಂದು ಹೇಳಿದರು.

ನಮ್ಮ ಸಂಸ್ಕೃತಿ ಮತ್ತು ಪರಂಪರೆ ಬಹಳ ದೊಡ್ಡದಿದೆ. ಅದರ ಅರ್ಥವನ್ನು ಇವತ್ತಿನ ಪೀಳಿಗೆಗೆ ತಿಳಿಸಿಕೊಡುವುದು ಮುಖ್ಯವಾಗಿದೆ. ಸಕಲ ಜೀವಾತ್ಮರಿಗೆ ಲೇಸು ಬಯಸುವುದು ವೀರಶೈವ ಲಿಂಗಾಯತರ ಸಂಸ್ಕೃತಿ ಮತ್ತು ಸಂಸ್ಕಾರ, ಇವತ್ತು ಆ ಸಹನೆ ಮತ್ತು ಸಂಸ್ಕೃತಿ ಕಡಿಮೆಯಾಗಿದೆ. ನಮ್ಮದು ವಿಶಾಲವಾದ ಮನೊಭಾವ, ಕ್ಷಮೆ ಬಹಳ ಸುಲಭವಾಗಿ ಮಾಡುತ್ತೇವೆ. ಆದರೆ, ಒಂದೊಂದು ಸಂದರ್ಭದಲ್ಲಿ ಇದೆ ನಮ್ಮ ದೌರ್ಬಲ್ಯವಾಗುತ್ತಿದೆ. ನಮ್ಮಲ್ಲಿ ಒಗ್ಗಟ್ಟಿದ್ದರೆ, ಭಾವನೆಗಳು ಒಂದಾದರೆ, ಯಾರೂ ಕೂಡ ನಮ್ಮನ್ನು ಮುಟ್ಟುವ ಸಾಹಸ ಮಾಡುವುದಿಲ್ಲ. ಮೂವತ್ತು ಪರ್ಸೆಂಟ್ ಇದ್ದವರು ಈಗ ಹತ್ತು ಪರ್ಸೆಂಟ್ ಗೆ ಇಳಿದಿದ್ದೇವೆ ಎಂದು ಗುರುಗಳು ಹೇಳಿದ್ದಾರೆ. ನಮ್ಮಲ್ಲಿ ಒಗ್ಗಟ್ಟು ಇಲ್ಲದೇ ಇರುವುದು ಇದಕ್ಕೆ ಕಾರಣವಾಗಿದೆ. ಗೋಡೆಯಲ್ಲಿ ಬಿರುಕು ಬಿದ್ದರೆ ಇರುವೆ, ಇಲಿಗಳೂ ಹೋಗುತ್ತವೆ. ಈಗ ಸಮೀಕ್ಷೆ ಬಂದಿದೆ ಎಂದು ಸೇರುವುದಲ್ಲ. ನಮ್ಮ ಆತ್ಮದ ಸಮೀಕ್ಷೆ ಮಾಡಿಕೊಳ್ಳಬೇಕು. ನಮ್ಮ ಪರಂಪರೆ ಏನು, ನಮ್ಮ ಕೈ ಭೂಮಿಯ ಕಡೆಗೆ ನೋಡುತ್ತಿತ್ತು. ಈಗ ನಾವು ಎಲ್ಲಿದ್ದೇವೆ ಎಂದು ನೋಡಿಕೊಳ್ಳಬೇಕು. ಎಲ್ಲರ ರೀತಿ ಸರಿ ಸಮಾನವಾಗಿ ನಿಂತಿದ್ದೇವೊ ಅಥವಾ ಕೆಳಗೆ ಇದ್ದೇವೆ ಎಂದು ಆತ್ಮ ಸಮೀಕ್ಷೆ ಮಾಡಿಕೊಳ್ಳಬೇಕು. ನಮ್ಮವರು ತಡವಾಗಿ ಏಳುತ್ತಾರೆ. ಎದ್ದರೆ ಮಾತ್ರ ಮಲಗುವುದಿಲ್ಲ. ಯಾರನ್ನು ಮಲಗಿಸಬೇಕೊ ಅವರನ್ನು ಮಲಗಿಸಿಯೇ ವಿಶ್ರಾಂತಿ ಪಡೆಯುವುದು ಈ ಸಂದೇಶ ನಾವು ಕಳಿಸಬೇಕಿದೆ ಎಂದರು.

ಧರ್ಮದ ಆಧಾರ ಮುಖ್ಯವಲ್ಲ:

ಆರ್ಥಿಕ ಸಾಮಾಜಿಕ ಸಮಿಕೆಯಲ್ಲಿ ಯಾವ ಸಮಾಜ ಶೈಕಣಿಕ, ಆರ್ಥಿಕವಾಗಿ ಎಷ್ಟು ಮುಂದಿದೆ ಬಡವರನ್ನು ಹೇಗೆ ಸರಿ ಸಮಾನ ಮಾಡಬೇಕು ಎಂದು ಸಮೀಕ್ಷೆ ಮಾಡುತ್ತಾರೆ. ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಜಾತಿ ಬಹಳ ಮುಖ್ಯವಲ್ಲ. ಆದರೆ ಹಿಂದುಳಿದವರನ್ನು ಮುಂದೆ ತರಲು ಅವರನ್ನು ಗುರುತಿಸುವುದು ಮುಖ್ಯ ಎಂದು ಹೇಳುತ್ತಾರೆ. ರಾಜ್ಯ ಸರ್ಕಾರಗಳು ಹಲವಾರು ಆದೇಶಗಳನ್ನು ಮಾಡುತ್ತವೆ. ಆದರೆ, ಕೋರ್ಟ್‌ನಲ್ಲಿ, ಕೇಂದ್ರ ಸರ್ಕಾರದ ಮಟ್ಟದಲ್ಲಿ ಬಿದ್ದು ಹೋಗುತ್ತವೆ. ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಬಹಳ ದಿನಗಳಿಂದ ಇದೆ. ಸಂವಿಧಾನದ ಪ್ರಕಾರ ಆರೇ ಧರ್ಮ ಇವೆ. ಹಿಂದು, ಇಸ್ಲಾಂ, ಕ್ರೈಸ್ಟ್, ಸಿಖ್, ಜೈನ, ಬೌದ್ಧ, ಇದರ ನಂತರ ಯಾವುದೇ ಧರ್ಮಕ್ಕೆ ಮಾನ್ಯತೆ ಕೊಟ್ಟಿಲ್ಲ ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.


Share It

You cannot copy content of this page