ಬೆಂಗಳೂರು: ಬೆಂಗಳೂರು ಉತ್ತರ ಜಿಲ್ಲೆಯ ಗೃಹರಕ್ಷಕ ದಳ ಖಾಲಿ ಇರುವ ಸ್ವಯಂ ಸೇವಕ ಗೃಹರಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.
ಗೃಹರಕ್ಷಕ ದಳವು ಒಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು, ಸಮಾದೇಷ್ಟರ ಕಚೇರಿ, ಗೃಹ ರಕ್ಷಕದಳ, ಬೆಂಗಳೂರು ಉತ್ತರ ಜಿಲ್ಲಾ ಕಚೇರಿ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಅಗ್ನಿಶಾಮಕ ಠಾಣೆ ಪಕ್ಕ ರಾಜಾಜಿನಗರ, ಬೆಂಗಳೂರು -560010 ಇಲ್ಲಿ ಅಕ್ಟೋಬರ್ 3 ರಿಂದ 31 ರವರೆಗೆ ಮಧ್ಯಾಹ್ನ 2:30 ರಿಂದ 5 ಗಂಟೆಯವರೆಗೆ ಉಚಿತವಾಗಿ ಅರ್ಜಿಗಳನ್ನು ವಿತರಿಸಲಾಗಲಿದೆ.
ಕಂಪ್ಯೂಟರ್ ಟೈಪಿಂಗ್ (ಕನ್ನಡ ಮತ್ತು ಇಂಗ್ಲಿಷ್), ವಾಹನ ಚಾಲಕರು, ಅಡುಗೆ ಭಟ್ಟರು, ಕಾರ್ಪೆಂಟರ್, ಎಲೆಕ್ಟ್ರಿಷಿಯನ್, ಪೇಂಟರ್, ಜೆಸಿಬಿ ಡ್ರೈವರ್ಸ್, ಸ್ವಿಮ್ಮರ್ಸ್, ವೆಲ್ಡರ್ಸ್, ಗಾರ್ಡನರ್ಸ್ ಮತ್ತು ಪ್ಲಂಬರ್ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ನೇಮಕಾತಿಗೆ ಅರ್ಹರಾಗಿದ್ದಾರೆ.
ಅರ್ಹ ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು, 20 ವರ್ಷದಿಂದ 50 ವರ್ಷದೊಳಗಿರಬೇಕು. ದೈಹಿಕವಾಗಿ ಸದೃಢರಾಗಿರಬೇಕು. ಅರ್ಜಿಯನ್ನು ಪಡೆಯುವ ಸಂದರ್ಭದಲ್ಲಿ ಜನ್ಮ ದಿನಾಂಕವುಳ್ಳ ಶಾಲೆಯ ಒರಿಜಿನಲ್ ಟಿ.ಸಿ ಅಥವ ಒರಿಜಿನಲ್ ಅಂಕಪಟ್ಟಿ ತರತಕ್ಕದ್ದು ಮತ್ತು ಸ್ಥಳೀಯವಾಗಿ ವಾಸವಾಗಿರಬೇಕು ಹಾಗೂ ಈ ಕುರಿತು ದಾಖಲೆ ಒದಗಿಸಬೇಕು ಎಂದು ಗೃಹರಕ್ಷಕ ದಳ ತಿಳಿಸಿದೆ.
ಗೃಹರಕ್ಷಕದಳ ಸ್ವಯಂ ಸೇವಕ ಸಂಸ್ಥೆಯಾಗಿದ್ದು, ಈ ಸಂಸ್ಥೆಯಲ್ಲಿ 3 ವರ್ಷಗಳ ಅವಧಿಗೆ ಮಾತ್ರ ಸೇವೆ ಸಲ್ಲಿಸಬಹುದಾಗಿದೆ. ಇದು ಖಾಯಂ ನೌಕರಿಯಾಗಿರುವುದಿಲ್ಲ. ಯಾವುದೇ ರೀತಿಯ ಮಾಸಿಕ ಸಂಬಳ ವಿಶೇಷ ಭತ್ಯೆಗಳನ್ನು ಸಂಸ್ಥೆಯು ನೀಡುವುದಿಲ್ಲ. ಸರ್ಕಾರವು ನಿಗಧಿ ಪಡಿಸಿರುವ ಗೌರವಧನವನ್ನು ಕರ್ತವ್ಯ ನಿರ್ವಹಿಸುವ ಅವಧಿಗೆ ಮಾತ್ರ ಪಾವತಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-23142542 ಗೆ ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದೆ.