News

ವಯಸ್ಸಾದ ಅತ್ತೆ ಮಾವನನ್ನ ನೋಡಿಕೊಳ್ಳದಿರುವುದು ಕ್ರೌರ್ಯ- ವಿಚ್ಚೇದನಕ್ಕೆ ಸಕಾರಣ – ದೆಹಲಿ ಹೈಕೋರ್ಟ್

Share It

ವಯಸ್ಸಾದ ಅತ್ತೆ ಮಾವನನ್ನ ನೋಡಿಕೊಳ್ಳದೆ ಇರುವುದು ವೈವಾಹಿಕ ವಿವಾದದಲ್ಲಿ ಕ್ರೌರ್ಯ ಎಂದು ಪರಿಗಣಿಸಬಹುದು. ಇದನ್ನ ಪರಿಗಣಿಸಿ ವಿಚ್ಚೇಧನ ಮಂಜೂರು ಮಾಡಬಹುದು ಎಂದು ದೆಹಲಿ ಹೈಕೋರ್ಟ್ ನ ವಿಭಾಗೀಯ ಪೀಠ ಕೌಟುಂಬಿಕ ನ್ಯಾಯಾಲಯದ ವಿಚ್ಚೇದನ ಅದೇಶವನ್ನ ಎತ್ತಿ ಹಿಡಿದು ತೀರ್ಪು ನೀಡಿದೆ.

ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ಅನಿಲ್ ಕ್ಷೇತ್ರಪಾಲ್ ಹಾಗೂ ಹರೀಶ್ ವಿದ್ಯಾನಾಥನ್ ಶಂಕರ್ ಈ ಮಹತ್ವದ ತೀರ್ಪು ನೀಡಿದ್ದಾರೆ. ದೆಹಲಿಯ ಮಹಿಳೆಯೊಬ್ಬರು ತಮ್ಮ ಗಂಡನಿಗೆ ವಿಚ್ಚೇದನ ನೀಡಿರುವ ಕೌಟುಂಬಿಕ ನ್ಯಾಯಾಲಯದ ಅದೇಶವನ್ನ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದರ ವಿಚಾರಣೆ ನಡೆಸಿದ ಪೀಠ ಕೌಟುಂಬಿಕ ನ್ಯಾಯಾಲಯದ ಅದೇಶವನ್ನ ಎತ್ತಿ ಹಿಡಿಯಿತು

ಅಲ್ಲದೆ ಇದೇ ವೇಳೆ ವಿಭಾಗೀಯ ಪೀಠ ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ ಪತ್ನಿ ವಯಸ್ಸಾದವರನ್ನ ನೋಡಿಕೊಳ್ಳಬೇಕು ಎಂದು ನಿರೀಕ್ಷಿಸುವುದು ವೈವಾಹಿಕ ಜೀವನದ ಜವಾಬ್ದಾರಿ. ಇಂತಹ ಜವಾಬ್ದಾರಿಯನ್ನ ತಿರಸ್ಕರಿಸುವುದು ವೈವಾಹಿಕ‌ ವ್ಯವಸ್ಥೆಯ ಕ್ರೌರ್ಯ. ಹೀಗಾಗಿ ಹಿಂದೂ ವಿವಾಹ ಕಾಯ್ದೆ 1955 ರ ಸೆಕ್ಷನ್ 13(1)(ia) ಅಡಿಯಲ್ಲಿ ವಿವಾಹದಿಂದ ವಿಚ್ಚೇದನ ನೀಡಲು ಸಕಾರಣವಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಕೋರ್ಟ್ ಮೆಟ್ಟಿಲೇರಿದ್ದ ಈ ದಂಪತಿಯು 1990 ರಲ್ಲಿ ವಿವಾಹವಾಗಿದ್ದರು. 1997 ರಲ್ಲಿ ಇವರಿಗೆ ಮಗುವಾಗಿತ್ತು.‌ ನಂತರ ಗಂಡನ ತಾಯಿ ಅನಾರೋಗ್ಯಕ್ಕೆ ಈಡಾಗಿದ್ದರು. ಇದರಿಂದಾಗಿ ತಾನು ಅವರನ್ನ ನೋಡಿಕೊಳ್ಳುವುದಿಲ್ಲ ಬೇರೆ ವಾಸ ಮಾಡಬೇಕು ಎಂದಿದ್ದಳು. ನಂತರ ಗಂಡನ ಮೇಲೆ ಪತ್ನಿ ಕೆಲವೊಂದು‌ ದೂರುಗಳನ್ನ ಪೊಲೀಸ್ ಠಾಣೆಗೆ ನೀಡಿದ್ದಳು. ನಂತರ ಗಂಡ ವಿಚ್ಚೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದ. ಕೊನೆಗೆ 2009 ರಲ್ಲಿ ಕೌಟುಂಬಿಕ ನ್ಯಾಯಾಲಯ ಗಂಡನಿಗೆ ವಿಚ್ಚೇದನ ಮಂಜೂರು ಮಾಡಿತ್ತು. ಇದನ್ನ ಪ್ರಶ್ನೆ ಮಾಡಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈಗ ಹೈಕೋರ್ಟ್ ಕೂಡ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನ ಎತ್ತಿ ಹಿಡಿದಿದೆ.


Share It

You cannot copy content of this page