ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿದ್ದ ಕ್ರೈಮ್ ನಂ 39/2025 ಪ್ರಕರಣ ಹಾಗೂ ಎಸ್ ಐ ಟಿ ನೀಡಿದ್ದ ನೊಟೀಸ್ ರದ್ದು ಮಾಡಬೇಕು ಎಂದು ಕೋರಿ ಕರ್ನಾಟಕ ಹೈಕೋರ್ಟ್ ಗೆ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್ ಟಿ ಹಾಗೂ ವಿಠ್ಠಲ ಗೌಡ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇಂದು ರಿಟ್ ಅರ್ಜಿಯ ವಿಚಾರಣೆ ಕರ್ನಾಟಕ ಹೈಕೋರ್ಟ್ ಏಕ ಸದಸ್ಯ ಪೀಠದಲ್ಲಿ ನಡೆಯಲಿದೆ.
ಇದೇ ವರ್ಷ ಜುಲೈ ನಾಲ್ಕನೇ ತಾರೀಕು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಚಿನ್ನಯ್ಯ ಎಂಬಾತ ನೀಡಿದ ದೂರು ಅಧರಿಸಿ ಕ್ರೈ ನಂಬರ್ 39/2025 ಅಡಿಯಲ್ಲಿ ಎಫ್ ಐ ಆರ್ ದಾಖಲಾಗಿತ್ತು. ನಂತರ ಈ ಪ್ರಕರಣದಲ್ಲಿ ದೂರುದಾರ ಚಿನ್ನಯ್ಯನ ಬಂಧನವಾಗಿತ್ತು. ಇದಕ್ಕೆ ಸಂಬಂಧಿಸಿ ಜುಲೈ 19 ರಂದು ರಾಜ್ಯ ಸರ್ಕಾರ ಹಿರಿಯ ಐಪಿಎಸ್ ಅಧಿಕಾರಿ ಪ್ರಣಬ್ ಮೊಹಾಂತಿ ನೇತೃತ್ವದಲ್ಲಿ ಎಸ್ ಐ ಟಿ ರಚನೆ ಮಾಡಿತ್ತು.
ನಂತರ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ಬಾರಿ ಗಿರೀಶ್ ಮಟ್ಟಣ್ಣನವರ್ , ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್ ಟಿ ಹಾಗೂ ವಿಠ್ಠಲಗೌಡ ವಿಚಾರಣೆಯಾಗಿತ್ತು. ಇದಾದ ಬಳಿಕವೂ ಮತ್ತೊಮ್ಮೆ ಎಸ್ ಐ ಟಿ ಇದೇ ತಿಂಗಳು 24/10/2025 ರಂದು ಈ ನಾಲ್ವರಿಗೆ BNSS 35(3) ಅಡಿಯಲ್ಲಿ ವಿಚಾರಣೆಗೆ ಹಾಜರಾಗಲು ನೊಟೀಸ್ ನೀಡಲಾಗಿತ್ತು. ಈಗ ಮೂಲ ಪ್ರಕರಣ ಹಾಗೂ ನೊಟೀಸ್ ಎರಡನ್ನು ರದ್ದು ಮಾಡಲು ಕೋರಿ ನಾಲ್ವರು ರಿಟ್ ಅರ್ಜಿಯನ್ನ ಕರ್ನಾಟಕ ಹೈಕೋರ್ಟ್ ಗೆ ಸಲ್ಲಿಕೆ ಮಾಡಿದ್ದಾರೆ. ಇದರ ವಿಚಾರಣೆ ಇಂದು ಹೈಕೋರ್ಟ್ ಏಕ ಸದಸ್ಯ ಪೀಠ ನಡೆಸಲಿದೆ. ಅರ್ಜಿದಾರರ ಪರ ಹಿರಿಯ ವಕೀಲ ಬಾಲನ್ ವಾದ ಮಾಡಲಿದ್ದಾರೆ.
CASE NO- WP32456/2025
KAHC010702822025
ಧರ್ಮಸ್ಥಳದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ಗೆ ರಿಟ್ ಅರ್ಜಿ

