ಬೆಂಗಳೂರು: ಸಾಮಾಜಿಕ ಜಾಲತಾಣಗಳ ಬಳಕೆಗೆ ವಯೋಮಿತಿ ನಿಗದಿ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್ ಈ ಕುರಿತಂತೆ ಕೇಂದ್ರ ಸರ್ಕಾರ ಚಿಂತನೆ ನಡೆಸಬೇಕೆಂದು ಸಲಹೆ ನೀಡಿದೆ.
ಸಾಮಾಜಿಕ ಜಾಲತಾಲಣಗಳಿಗೆ ಶಾಲಾ ಮಕ್ಕಳೂ ಸೇರಿದಂತೆ ವಿದ್ಯಾರ್ಥಿಗಳು ದಾಸರಾಗಿದ್ದಾರೆ. 17-18 ವರ್ಷದ ಮಕ್ಕಳಿಗೆ ದೇಶದ ಹಿತಾಸಕ್ತಿಗೆ ಯಾವುದು ಪೂರಕ, ಯಾವುದು ಮಾರಕ ಎಂಬುದನ್ನು ನಿರ್ಧರಿಸುವಷ್ಟು ಪ್ರೌಢಿಮೆ ಇರುತ್ತದೆಯೇ. ಹೀಗಾಗಿ ಸಾಮಾಜಿಕ ಜಾಲತಾಣಗಳ ಬಳಕೆದಾರರಿಗೆ ಮತದಾನಕ್ಕೆ ನಿಗದಿ ಮಾಡಿರುವಂತೆ 21 ವರ್ಷ ವಯೋಮಿತಿ ಇದ್ದರೆ ಸೂಕ್ತ ಎಂದು ಹೈಕೋರ್ಟ್ ಹೇಳಿದೆ.
ಅಲ್ಲದೇ, ಚಿಕ್ಕ ವಯಸ್ಸಿನವರಿಗೆ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸುವದು ಉತ್ತಮ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಚಿಂತನೆ ನಡೆಸಬೇಕಿದೆ ಎಂದು ಹೈಕೋರ್ಟ್ ಮೌಖಿಕ ಸಲಹೆ ನೀಡಿದೆ.

