ಜಾತಿಗಣತಿ ಅಥವಾ ಗಣತಿ ಕಾರ್ಯ ಮೇಲ್ಮನವಿ ಹೋಲುವ ಯಾವುದೇ ಪ್ರಕ್ರಿಯೆಯನ್ನು ನಡೆಸುವ ಅಧಿಕಾರ ರಾಜ್ಯಗಳಿಗೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಮುಂದೆ ಕೇಂದ್ರ ಸರ್ಕಾರ ವಾದಿಸಿದೆ.
ಬಿಹಾರದ ಜಾತಿ ಆಧಾರಿತ ಜನಗಣತಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾ ಮಾಡಿದ್ದ ಪಾಟ್ನಾ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಗೆ ಕೇಂದ್ರ ಗೃಹ ಸಚಿವಾಲಯ ಈ ಕುರಿತಂತೆ ಅಫಿಡವಿಟ್ ಸಲ್ಲಿಸಿದೆ.
ಜನಗಣತಿಯ ವಿಷಯವು ಸಂವಿಧಾನದ ಏಳನೇ ಅನುಸೂಚಿ 69ರ ಅಡಿಯಲ್ಲಿ ಕೇಂದ್ರ ಪಟ್ಟಿಯಲ್ಲಿ ಮಾತ್ರ ಬರುತ್ತದೆ. ಜನಗಣತಿ ಕಾಯ್ದೆ-1948 ಪ್ರಕಾರ ಜನಗಣತಿ ನಡೆಸುವ ಅಧಿಕಾರ ಕೇಂದ್ರಕ್ಕೆ ಮಾತ್ರ ಇದೆ ಎಂದು ವಾದಿಸಿದೆ.

