News

ರಾಜ್ಯಾದ್ಯಂತ ನಡೆದ ಟಿಇಟಿ ಪರೀಕ್ಷೆ ಸುಸೂತ್ರ

Share It

ಬೆಂಗಳೂರು: ರಾಜ್ಯಾದ್ಯಂತ ಭಾನುವಾರ ನಡೆದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2025(ಟಿಇಟಿ) ಸುಸೂತ್ರವಾಗಿ ನಡೆದಿದ್ದು, ಪತ್ರಿಕೆ-1ಕ್ಕೆ ಶೇ. 93.35, ಪತ್ರಿಕೆ-2ರಲ್ಲಿ ಶೇ. 94.79 ಮಂದಿ ಹಾಜರಾಗಿದ್ದಾರೆ.

ಪತ್ರಿಕೆ-1ಕ್ಕೆ 85,042 ಮಂದಿ ನೋಂದಣಿ ಮಾಡಿಕೊಂಡಿದ್ದು, 79,394 ಮಂದಿ ಪರೀಕ್ಷೆ ಬರೆದಿದ್ದಾರೆ. ಪತ್ರಿಕೆ-2ಕ್ಕೆ 2,50,189 ಮಂದಿ ನೋಂದಣಿ ಮಾಡಿಕೊಂಡಿದ್ದು, 2,37,164 ಮಂದಿ ಪರೀಕ್ಷೆ ಬರೆದಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕದ ಸಹ ನಿರ್ದೇಶಕರು ತಿಳಿಸಿದ್ದಾರೆ.


Share It

You cannot copy content of this page