News

ಯುಜಿ ನೀಟ್ ಸ್ಟ್ರೇ ವೇಕೆನ್ಸಿ ಸುತ್ತು; ಆಪ್ಷನ್ಸ್ ದಾಖಲಿಸಲು ಡಿ.12 ಕೊನೆ ದಿನ

Share It

ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಆನ್ ಲೈನ್ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆಗೆ ಹೊಸದಾಗಿ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ವೆಬ್ ಸೈಟ್ ನಲ್ಲಿ ಲಿಂಕ್ ತೆರೆಯಲಾಗಿದ್ದು, ಡಿ.12ರಂದು ಸಂಜೆ 5ಗಂಟೆವರೆಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

ಅಭ್ಯರ್ಥಿಗಳು, ಮೂರನೇ ಸುತ್ತಿನಲ್ಲಿ ಪಾವತಿಸಿರುವ ವೈದ್ಯಕೀಯ ಕೋರ್ಸ್ ಶುಲ್ಕದ ಅನ್ವಯ ಇಚ್ಛೆಗಳನ್ನು ದಾಖಲಿಸಬಹುದಾಗಿದೆ.‌ 3ನೇ ಸುತ್ತಿನಲ್ಲಿ ದಂತ ವೈದ್ಯಕೀಯ ಸೀಟು ಸಿಕ್ಕಿರುವವರು ಕೂಡ ವೈದ್ಯಕೀಯ ಕೋರ್ಸ್ ಗೆ ಆಪ್ಷನ್ಸ್ ದಾಖಲಿಸಬಹುದು ಎಂದು ಮಾಹಿತಿ ನೀಡಿದ್ದಾರೆ.

ಡಿ.13ರಂದು ಬೆಳಿಗ್ಗೆ 10ಕ್ಕೆ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಹಾಗೂ ಅದೇ ದಿನ ಮಧ್ಯಾಹ್ನ 2ಗಂಟೆಗೆ ವೈದ್ಯಕೀಯ ಕೋರ್ಸ್ ನ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ದಂತ ವೈದ್ಯಕೀಯ ಕೋರ್ಸ್ ನ ಅಂತಿಮ ಫಲಿತಾಂಶವನ್ನು ಡಿ.13ರಂದು ಮಧ್ಯಾಹ್ನ 3ಗಂಟೆಗೆ ಪ್ರಕಟಿಸಲಾಗುತ್ತದೆ. ಸೀಟು ಹಂಚಿಕೆಯಾದವರು ಡಿ.15ರೊಳಗೆ ಶುಲ್ಕ ಪಾವತಿಸಿ, ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು ಎಂದು ವಿವರಿಸಿದ್ದಾರೆ.

ಇದುವರೆಗೂ ನೋಂದಣಿ ಮಾಡದಿರುವ ಅಭ್ಯರ್ಥಿಗಳು ಸ್ಟ್ರೇ ವೇಕೆನ್ಸಿ ಸುತ್ತಿನಲ್ಲಿ ಭಾಗವಹಿಸಲು ಇಚ್ಛೆ ಇದ್ದಲ್ಲಿ ತಾವು ತೆಗೆದುಕೊಳ್ಳಬಯಸುವ ಸೀಟಿನ ಸಂಪೂರ್ಣ ಶುಲ್ಕದ ಡಿಡಿ (ಕಾರ್ಯನಿರ್ವಾಹಕ ನಿರ್ದೇಶಕರು ಕೆಇಎ) ತೆಗೆದುಕೊಂಡು ಡಿ.12ರಂದು ಬೆಳಿಗ್ಗೆ 11ರಿಂದ 2ಗಂಟೆಯೊಳಗೆ ಖುದ್ದಾಗಿ ಬಂದು ಮನವಿ ಸಲ್ಲಿಸಬೇಕು. ಬಳಿಕ ಅಂತಹವರಿಗೂ ಅವಕಾಶ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.


Share It

You cannot copy content of this page