News

ಬ್ಯಾಂಕ್ ಗೆ ಪಾಸ್ಪೋರ್ಟ್ ಮುಟ್ಟುಗೋಲು ಅಧಿಕಾರವಿಲ್ಲ

Share It

ವಿದೇಶಿ ಪೌರತ್ವ ಹೊಂದಿರುವವರ ಪಾಸ್‌ಪೋರ್ಟ್ ಮತ್ತು ಭಾರತೀಯ ಸಾಗರೋತ್ತರ ನಾಗರಿಕ (ಒಸಿಐ) ಕಾರ್ಡ್ ಅನ್ನು ವಶಕ್ಕೆ ಪಡೆಯಲು ಬ್ಯಾಂಕ್‌ಗೆ ಅಧಿಕಾರ ಇಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಅಲ್ಲದೆ, 2022ರ ಅ.17ರಿಂದ ಬ್ಯಾಂಕ್ ವಶದಲ್ಲಿಟ್ಟುಕೊಂಡಿದ್ದ ಬ್ರಿಟಿಷ್ ಪಾಸ್‌ಪೋರ್ಟ್ ಮತ್ತು ಒಐಸಿ ಕಾರ್ಡ್ ಹಿಂದಿರುಗಿಸಲು ನಿರ್ದೇಶನ ನೀಡಿದೆ.

ತನ್ನ ಪಾಸ್‌ಪೋರ್ಟ್ ಮತ್ತು ಒಸಿಐ ಕಾರ್ಡ್ ವಶಕ್ಕೆ ಪಡೆದ ಕ್ರಮ ಪ್ರಶ್ನಿಸಿ ಬ್ರಿಟನ್ ಪೌರತ್ವ ಹೊಂದಿರುವ ಕೋಶಿ ವರ್ಗೀಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಈ ಆದೇಶ ನೀಡಿದೆ.

ಅರ್ಜಿದಾರರ ಒಸಿಐ ಕಾರ್ಡ್ ಮತ್ತು ಪಾಸ್‌ಪೋರ್ಟ್ ಅನ್ನು ಬ್ಯಾಂಕ್ ಅಧಿಕಾರಿಗಳಿಗೆ ಠೇವಣಿ ಬದಲು ಸ್ವಯಂಪ್ರೇರಿತವಾಗಿ ನೀಡಿದ್ದರೂ, ಅದನ್ನು ಬ್ಯಾಂಕ್ 15 ದಿನಕ್ಕಿಂತಲೂ ಹೆಚ್ಚು ಕಾಲ ತನ್ನಲ್ಲಿಟ್ಟುಕೊಳ್ಳುವುದಕ್ಕೆ ಅವಕಾಶವಿಲ್ಲ’ ಎಂದು ನ್ಯಾಯಪೀಠ ತಿಳಿಸಿದೆ.

“ಅರ್ಜಿದಾರರು ಗ್ರೇಟ್ ಬ್ರಿಟನ್ ಪ್ರಜೆಯಾಗಿದ್ದು, 2018ರಿಂದ ಭಾರತದಲ್ಲಿ ನೆಲೆಸಲು ಓವರ್‌ಸೀಸ್ ಸಿಟಿಜನ್ ಆಫ್ ಇಂಡಿಯಾ ಕಾರ್ಡ್ (ಒಸಿಐ) ಅನ್ನು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ) ಯಿಂದ ಪಡೆದುಕೊಂಡಿದ್ದಾರೆ. ಭಾರತದಲ್ಲಿ ಅದನ್ನು ವಶಕ್ಕೆ ಪಡೆಯುವುದಕ್ಕೆ ಅಧಿಕಾರವಿಲ್ಲ,” ಎಂದು ನ್ಯಾಯಪೀಠ ಹೇಳಿದೆ

ಬ್ಯಾಂಕ್ ವಕೀಲರು, “ಅರ್ಜಿದಾರರು ಸಾಲಕ್ಕೆ ಬದಲಾಗಿ ಬ್ಯಾಂಕ್‌ಗೆ ನೀಡಿರುವ ಚೆಕ್‌ಗಳು ನಗದೀಕರಿಸುವವರೆಗೆ ತಮ್ಮ ಪಾಸ್ ಪೋರ್ಟ್ ಮತ್ತು ಒಸಿಐ ಅನ್ನು ಸ್ವಯಂಪ್ರೇರಿತವಾಗಿ ಬ್ಯಾಂಕ್‌ಗೆ ನೀಡಿದ್ದಾರೆ” ಎಂದ ವಾದಿಸಿದ್ದರು.


Share It

You cannot copy content of this page