ಕೇಂದ್ರ ಸಚಿವಾಲಯದ ಅಧೀನದಲ್ಲಿರುವ ಜಾರಿ ನಿರ್ದೇಶನಾಲಯವು (ಇ.ಡಿ) ದೇಶದಾದ್ಯಂತ ತನ್ನ ವಿವಿಧ ಘಟಕಗಳಲ್ಲಿ ಖಾಲಿ ಇರುವ ಒಟ್ಟು 75 ಲೀಗಲ್ ಕನ್ಸಲೆಂಟ್ ಹುದ್ದೆಗಳಿಗೆ ನೇಮಕ ನಡೆಸಲಿದ್ದು, ಆಸಕ್ತರು ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಲು ಡಿಸೆಂಬರ್ 30ರ ಗಡುವು ನೀಡಲಾಗಿದೆ.
ಅರ್ಹತೆ: ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯಗಳಿಂದ 3 ಅಥವಾ 5 ವರ್ಷಗಳ ಕಾನೂನು ಪದವಿ ವಿದ್ಯಾರ್ಹತೆ ಹೊಂದಿರಬೇಕು. ಎಲ್ ಎಲ್‌ಎಂ ವಿದ್ಯಾರ್ಹತೆ ಹೊಂದಿರುವವರೂ ಈ ಹುದ್ದೆಗಳಿಗೆ ಪ್ರಯತ್ನಿಸಬಹುದು. ಸಂಬಂಧಿತ ವಲಯದಲ್ಲಿ ಮೂರು ವರ್ಷಗಳ ಸೇವಾನುಭವ ನಿರೀಕ್ಷಿಸಲಾಗಿದೆ.
ವಯೋಮಿತಿ: ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ನಿಯಮಾನುಸಾರ ಮೀಸಲಾತಿ ವ್ಯಾಪ್ತಿಗೆ ಒಳಪಡುವ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಅರ್ಜಿ ಸಲ್ಲಿಸುವ ವಿಳಾಸ: ಅರ್ಜಿ ಸಲ್ಲಿಸಲು ಮೇಲ್ ವಿಳಾಸ ddlegal-ed@gov.in ನೀಡಲಾಗಿದೆ. ಹೆಚ್ಚಿನ ವಿವರಗಳಿಗೆ ಇ.ಡಿ.ವೆಬ್ ಸೈಟ್ https://enforcementdirectorate.gov.in ಗೆ ಅಥವಾ https://enforcementdirectorate.gov.in/vacancies ಭೇಟಿ ನೀಡಬಹುದಾಗಿದೆ.
ವೇತನ: 80,000/- ರೂ ಇರಲಿದೆ.
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿ ನಂತರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಮಾಡಲಾಗುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ಭಾಗದಲ್ಲಾದರೂ ಸೇವೆ ಸಲ್ಲಿಸಲು ಸಿದ್ದರಿರಬೇಕು. ಆರಂಭಿಕವಾಗಿ 3 ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಉದ್ಯೋಗಿಯ ಕಾರ್ಯಕ್ಷಮತೆ ಆಧರಿಸಿ ಮತ್ತಷ್ಟು ಕಾಲ ಸೇವಾವಧಿ ವಿಸ್ತರಿಸಲಾಗುತ್ತದೆ.
