ಸಾಗರ: ಸಾಗರ ಜಿಲ್ಲೆಯನ್ನು ಮಾಡಲು ಅಗ್ರಹಿಸಿ ಕಳೆದ ತಿಂಗಳೆಲ್ಲಾ ಹೋರಾಟಗಳು ಧರಣಿಗಳು ನಡೆದಿದ್ದವು, ಆದರೆ ಸರ್ಕಾರದ ಗಮನ ಸೆಳೆಯಲು ಜಿಲ್ಲಾ ಹೋರಾಟ ಸಮಿತಿ ಬುಧವಾರ ಸಾಗರ ಬಂದ್ ಗೆ ಕರೆ ನೀಡಿತ್ತು, ಬಂದ್ ಗೆ ಹೋಟೇಲ್ ಮಾಲೀಕರ ಸಂಘ, ವರ್ತಕರ ಸಂಘ, ರಕ್ಷಣಾ ವೇದಿಕೆ, ವಕೀಲರ ಸಂಘ, ಅನೇಕ ಸಂಘ ಸಂಸ್ಥೆಗಳು ಬಂದ್ ಗೆ ಸಂಪೂರ್ಣಾ ಬೆಂಬಲ ಸೂಚಿಸಿದ್ದವು. ಆದ್ದರಿಂದ ಇಂದು ಸಾಗರ ನಗರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಯಾವುದೇ ಅಂಗಡಿ ಮುಂಗಟ್ಟು ತೆರಯದೆ ಸಂಪೂರ್ಣ ಬೆಂಬಲ ವ್ಯಕ್ತವಾಯಿತು.
ಬಂದ್ ಗೆ ಕರೆ ನೀಡಿದ್ದ ಹೋರಾಟ ಸಮಿತಿಯು ಗಣಪತಿ ದೇವಸ್ಥಾನದಿಂದ ಮೆರವಣಿಗೆ ಹೊರಟು ಸಾಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾಗರ್ ಹೋಟೆಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ ಹೋರಾಟ ಸಮಿತಿಯ ಸಂಚಾಲಕ ತಿ.ನಾ. ಶ್ರೀನಿವಾಸ್ ಮಾತನಾಡಿ, ಜಿಲ್ಲೆಯ ಹೋರಾಟಕ್ಕೆ ಮಣಿಯದಿದ್ದರೆ ಪಕ್ಷಾತೀತವಾಗಿ ನಿಯೋಗ ಹೋಗಿ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಅಗ್ರಹಿಸೋಣ ಎಂದು ಎಲ್ಲರಲ್ಲೋ ಒತ್ತಾಯಿಸಿದರು.
ಸುಮಾರು 80 ಕಿಲೋಮಿಟರ್ ದೂರ ಇರುವ ಜಿಲ್ಲಾ ಕೇಂದ್ರಕ್ಕೆ ಓಡಾಡಬೇಕು ನಮ್ಮ ಸಾಗರವೇ ಜಿಲ್ಲಾ ಕೇಂದ್ರವಾದರೇ ನಮಗೆ ಎಲ್ಲಾ ಅನುಕೂಲವಾಗುತ್ತದೆ. ಜಿಲ್ಲೆ ಮಾಡಲು ಬೇಕಾದ ಎಲ್ಲಾ ಅರ್ಹತೆಗಳು ಸಾಗರ ತಾಲೂಕಿದೆ ಮತ್ತು ಜನಸಾಂದ್ರತೆಯಿದೆ ಎಂದರು.
ನಂತರ ಹೋಟೆಲ್ ಮಾಲೀಕರ ಸಂಘದ ಅದ್ಯಕ್ಷ ಉಮೇಶ್ ಮಾತನಾಡಿ, ಒಂದು ವೇಳೆ ಸರ್ಕಾರ ನಮ್ಮ ಹೋರಾಟಕ್ಕೆ ಬೆಲೆ ನೀಡದಿದ್ದರೆ ಮಲೆನಾಡಿಗರಾದ ನಾವು ಕರ್ನಾಟಕಕ್ಕೆ ಕೊಟ್ಟ ವಿದ್ಯುತ್ ನ್ನು ತಡೆ ಹಿಡಿದು ಪ್ರತಿಭಟಿಸೋಣ ಎಂದು ಕರೆ ನೀಡಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಬಿ.ಜೆ.ಪಿ ಮುಖಂಡ ಟಿ.ಡಿ ಮೇಘ ರಾಜ್ ಮಾತನಾಡಿ ನಮ್ಮ ಪಕ್ಷ ಸಂಪೂರ್ಣ ಸಹಕಾರ ಮತ್ತು ನಮ್ಮ ಸಂಸದರ ಬೆಂಬಲ ಇರುತ್ತದೆ ಎಂದರು. ಪ್ರತಿಭಟನೆಯ ವೇಳೆ ಅಶ್ವೀನಿ ಕುಮಾರ್, ಹಿತಕರ್ ಜೈನ್, ಸುಂದರ್ ಸಿಂಗ್ ಮಾತನಾಡಿದರು. ಈ ಸಂಧರ್ಭದಲ್ಲಿ ವಕೀಲರ ಸಂಘವು ಪಾಲ್ಗೊಂಡು ಬೆಂಬಲ ಸೂಚಿಸಿತು.
