ಬೆಂಗಳೂರು: ಯಲಹಂಕ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಹೆಡ್ ಕಾನ್ಸ್ಟೇಬಲ್ ತಡೆದು ಆತನ ಜೀವ ಉಳಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸೋಮವಾರ ಆರ್‌ಎಂಝಡ್ ಗಲೇರಿಯಾ ಅಪಾರ್ಟ್‌ಮೆಂಟ್ಸ್‌ನ ನಿವಾಸಿಯೊಬ್ಬರು ಸಂಜೆ 5.40 ರ ಸುಮಾರಿಗೆ ಹಳಿಗಳ ಮೇಲೆ ಬಿದ್ದಿದ್ದ ವ್ಯಕ್ತಿಯನ್ನು ನೋಡಿ, ವೀಡಿಯೊ ರೆಕಾರ್ಡ್ ಮಾಡಿ ತುರ್ತು ಸಹಾಯವಾಣಿ 112 ಗೆ ಮಾಹಿತಿ ನೀಡಿದ್ದರು.
ಹೊಯ್ಸಳ, ಚೀತಾ ಪೊಲೀಸ್ ಗಸ್ತು ದಳಕ್ಕೆ ತ್ವರಿತವಾಗಿ ಮಾಹಿತಿಯನ್ನು ರವಾನಿಸಲಾಗಿತ್ತು. ಹೆಡ್ ಕಾನ್ಸ್ಟೇಬಲ್ ಶ್ರೀಧರ್ ಮೂರ್ತಿ ತಕ್ಷಣ ಪ್ರತಿಕ್ರಿಯಿಸಿದ್ನಿದರು. ನಿಖರವಾದ ಸ್ಥಳ, ವಿವರಗಳು ಮತ್ತು ನೈಜ ಸಮಯವನ್ನು ತಿಳಿಯಲು ಕರೆ ಮಾಡಿದವರನ್ನು ಸಂಪರ್ಕಿಸಿ ಸಂಜೆ ಸಂಜೆ ಸುಮಾರು 5.50 ರ ಹೊತ್ತಿಗೆ ಸ್ಥಳಕ್ಕೆ ತಲುಪಿದ್ದರು.
ವ್ಯಕ್ತಿ ಹಳಿಯ ಮೇಲೆ ಬಿದ್ದಿರುವುದನ್ನು ಕಂಡ ಅವರು ಮತ್ತು ತಡಮಾಡದೆ ಮಧ್ಯಪ್ರವೇಶಿಸಿ, ಎದ್ದೇಳಲು ಹೇಳಿದರು. ಆ ವ್ಯಕ್ತಿ ಒಪ್ಪಿಕೊಂಡು ಹಳಿಯಿಂದ ಹೊರಗಡೆ ಬಂದರು. ಪೂರ್ತಿ ಕುಡಿತದ ನಶೆಯಲ್ಲಿ ಆತ ಇರುವುದು ಕಂಡು ಬಂದಿತ್ತು. ನಂತರ ಮೂರ್ತಿ ಅವನಿಗೆ ಸಲಹೆ ನೀಡಿ, ಆತ್ಮಹತ್ಯೆ ಪರಿಹಾರವಲ್ಲ ಎಂದು ಅವನಿಗೆ ಭರವಸೆ ನೀಡಿದರು ಮತ್ ಅವನ ಸಮಸ್ಯೆಗಳ ಬಗ್ಗೆ ಮಾತನಾಡುವಂತೆ ಪ್ರೋತ್ಸಾಹಿಸಿದ್ದರು.
ಬೇಗೂರು ಬಳಿಯ ಹೂವಿನಾಯಕನಹಳ್ಳಿ ನಿವಾಸಿ ಸುರೇಶ್ (ಹೆಸರು ಬದಲಾಯಿಸಲಾಗಿದೆ) ಅವರು ಬೈಕ್-ಟ್ಯಾಕ್ಸಿ ಕ್ಯಾಪ್ಟನ್ ಆಗಿ ಕೆಲಸ ಮಾಡುತ್ತಿದ್ದರು. ಈ ಹಿಂದೆ ವ್ಯವಹಾರ ನಡೆಸುತ್ತಿದ್ದ ಅವರು ಭಾರಿ ನಷ್ಟ ಅನುಭವಿಸಿದ್ದರು. ಸುಮಾರು 1 ಕೋಟಿ ರೂ. ಸಾಲವಾಗಿತ್ತು. ಆರ್ಥಿಕ ಒತ್ತಡ ಮತ್ತು ಪತ್ನಿ ಬೇರ್ಪಟ್ಟ ಸಂಗತಿ ಸೇರಿದಂತೆ ವೈಯಕ್ತಿಕ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಆತ್ಮಹತ್ಯೆಗೆ ಯತ್ನಿಸಿದ್ದು ತಿಳಿದು ಬಂದಿತ್ತು.
ರಕ್ಷಣೆಯ ಐದು ನಿಮಿಷಗಳ ರೈಲೊಂದು ಹಳಿಯಲ್ಲಿ ಹಾದುಹೋಗಿತ್ತು. ನಂತರ ಸುರೇಶ್ ಅವರ ಅಣ್ಣನನ್ನು ಸಂಪರ್ಕಿಸಿ ಸುರಕ್ಷಿತವಾಗಿ ವ್ಯಕ್ತಿಯನ್ನು ಮನೆಗೆ ಕಳುಹಿಸಲಾಯಿತು. ಮೂರ್ತಿ ಅವರ ಕಾರ್ಯತತ್ಪರತೆ, ಸಮರ್ಪಣೆ ಮತ್ತು ಮಾನವೀಯ ಮನೋಭಾವವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ. ಅವರ ಸಕಾಲಿಕ ಕ್ರಮವು ಒಂದು ಜೀವವನ್ನು ಉಳಿಸಿದೆ. ತುರ್ತು ಸಹಾಯವಾಣಿಯನ್ನು ಸಂಪರ್ಕಿಸಿದ ನಿವಾಸಿಗಳ ಜಾಗರೂಕತೆಯನ್ನು ಅಧಿಕಾರಿಗಳು ಶ್ಲಾಘಿಸಿದ್ದಾರೆ.
